ಆರ್ಥಿಕ ಹೊರೆ ಇಳಿಸುವ ಭಾಗವಾಗಿ ಪ್ರಮುಖ ಡಿಜಿಟಲ್ ಪೇಮೆಂಟ್ ಕಂಪನಿ ಪೇಟಿಎಂ 1 ಸಾವಿರ ನೌಕರರನ್ನು ಉದ್ಯೋಗದಿಂದ ತೆಗೆದು ಹಾಕಿದೆ.
ಪೇಟಿಎಂ ಕೆಲಸ ಮಾಡುತ್ತಿರುವ ನೌಕರರ ಪೈಕಿ ಶೇಕಡಾ 10ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಈ ಆರ್ಥಿಕ ವರ್ಷದ ಮೊದಲ ಮೂರು ತೈಮಾಸಿಕ ಅವಧಿಯಲ್ಲಿ ಹೊಸ ಕಂಪನಿಗಳು 20 ಸಾವಿರ ನೌಕರರನ್ನು ಕೆಲಸದಿಂದ ತೆಗೆದುಹಾಕಿವೆ.
ಪೇಟಿಎಂ ಮಾರ್ಚ್ ಅಂತ್ಯದ ವೇಳೆ 12,554 ಕೋಟಿ ರೂಪಾಯಿ ಮೊತ್ತದ ಸಾಲವನ್ನು ವಿತರಿಸಿದ್ದರೆ, ಸೆಪ್ಟೆಂಬರ್ ಅಂತ್ಯಕ್ಕೆ 16,211 ಕೋಟಿ ರೂಪಾಯಿ ಮೊತ್ತದ ಸಾಲವನ್ನು ವಿತರಿಸಿತ್ತು.
ಮಾರ್ಚ್ ವೇಳೆ ಪೇಟಿಎಂ ಬಳಸುತ್ತಿರುವ ವ್ಯಾಪಾರಿಗಳ ಸಂಖ್ಯೆ 68 ಲಕ್ಷವಿದ್ದರೆ, ಸೆಪ್ಟೆಂಬರ್ ವೇಳೆಗೆ 92 ಲಕ್ಷದಷ್ಟು ಇತ್ತು.
ಮಾರ್ಚ್ ವೇಳೆಗೆ ಪೇಟಿಎಂ ಮೂಲಕ 9 ಕೋಟಿ ರೂಪಾಯಿ ಮತ್ತು ಸೆಪ್ಟೆಂಬರ್ ವೇಳೆಗೆ 9.5 ಕೋಟಿ ರೂಪಾಯಿ ವ್ಯವಹಾರ ಆಗಿತ್ತು.
ADVERTISEMENT
ADVERTISEMENT