ಮಂಗಳೂರಿಗೆ ಹೊರಟ್ಟಿದ್ದ ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.
ವಿಜಯಪುರದಿಂದ ಮಂಗಳೂರಿಗೆ ಹೊರಟ್ಟಿದ್ದ ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೃತ್ಯ ನಡೆದಿರುವ ಕೆಎಸ್ಆರ್ಟಿಸಿ ಬಸ್ ನೋಂದಣಿ ಸಂಖ್ಯೆ ಕೆಎ 19, ಎಫ್-3554.
ನಾನ್ ಸ್ಲೀಪರ್ ಬಸ್ನ ಮೇಲ್ಭಾಗದಲ್ಲಿ ಮಲಗಿದ್ದ ವರ್ಷದ ಪ್ರಯಾಣಿಕ ಕೆಳಗಿನ ಆಸನದಲ್ಲಿ ಮಲಗಿದ್ದ 20 ವರ್ಷದ ಪ್ರಯಾಣಿಕರ ಸೀಟಿನ ಮೇಲೆ ಕೃತ್ಯ ಎಸಗಿದ್ದಾನೆ.
ಹುಬ್ಬಳ್ಳಿಯ ಕೆರಸೂರು ಡಾಬಾದ ಬಳಿ ಊಟಕ್ಕೆ ನಿಲ್ಲಿಸಿದ್ದಾಗ ಕೃತ್ಯ ಎಸಗಿದ್ದಾನೆ. ಊಟಕ್ಕೆ ನಿಲ್ಲಿಸಿದ್ದಾಗ ಆಕೆ ಬಸ್ನಿಂದ ಇಳಿದು ಹೊರಹೋಗಿ ವಾಪಸ್ ಬಂದಾಗ ಕಿಡಿಗೇಡಿ ಪ್ರಯಾಣಿಕ ಕೃತ್ಯ ಎಸಗಿರುವುದು ಗೊತ್ತಾಗಿದೆ.
ಕೃತ್ಯ ಎಸಗಿದವನು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಈತ ವಿಜಯಪುರದಿಂದ ಮಂಗಳೂರಿಗೆ ಹೊರಟ್ಟಿದ್ದ. ಈತ ಕುಡಿದ ಮತ್ತಲ್ಲಿದ್ದ ಎಂದು ತಿಳಿದುಬಂದಿದೆ.
ADVERTISEMENT
ADVERTISEMENT