ನಮ್ಮ ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.48 ರೂಪಾಯಿಯಿಂದ ಹಿಡಿದು 115ರೂಪಾಯಿವರೆಗೂ ಇದೆ.
ಆದರೆ, ಜಗತ್ತಿನಲ್ಲೇ ಲೀಟರ್ ಪೆಟ್ರೋಲ್ ದರ ಅತೀ ಹೆಚ್ಚು ಇರುವುದು ಎಲ್ಲಿ.? ಅತ್ಯಂತ ಕಡಿಮೆ ಬೆಲೆ ಇರುವುದು ಎಲ್ಲಿ ಎಂಬುದನ್ನು ನೋಡೋಣ.
ಹಣದುಬ್ಬರದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ವಿಶ್ವದಲ್ಲೇ ದುಬಾರಿ. ಅಲ್ಲಿ ಲೀಟರ್ ಪೆಟ್ರೋಲ್ ಬೆಲೆ ಬರೋಬ್ಬರಿ 283 ರೂಪಾಯಿ ಇದೆ.
ಅತ್ಯಂತ ಅಗ್ಗದ ಬೆಲೆಗೆ ಪೆಟ್ರೋಲ್ ದೊರೆಯುವ ದೇಶ ವೆನಿಜುಯೆಲಾ. ಅಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕೇವಲ 1.89 ರೂಪಾಯಿ ಮಾತ್ರ.
ನಮ್ಮ ಸುತ್ತಮುತ್ತಲಿನ ದೇಶಗಳಲ್ಲಿ ತೈಲ ದರವನ್ನು ನಮ್ಮ ರೂಪಾಯಿ ಮೌಲ್ಯದಲ್ಲಿ ಎಷ್ಟು ಎಂದು ನೋಡೋಣ.
# ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 63.43 ರೂಪಾಯಿ.
# ಬಾಂಗ್ಲಾದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ 78.43 ರೂಪಾಯಿ
# ನೇಪಾಳದಲ್ಲಿ ಲೀಟರ್ ಪೆಟ್ರೋಲ್ ಬೆಲೆ 93 ರೂಪಾಯಿ ಇದೆ.
# ಲಿಬಿಯಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 2.43 ರೂಪಾಯಿ ಮಾತ್ರ.
# ಅಮೇರಿಕಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 93.89 ರೂಪಾಯಿ ಇದೆ.
# ಆಸ್ಟ್ರೇಲಿಯಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.69 ರೂಪಾಯಿ ಇದೆ.
# ಬ್ರಿಟನ್ ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 161 ರೂಪಾಯಿ ಇದೆ.
# ಮೋನಾಕೋ, ಫಿನ್ ಲ್ಯಾಂಡ್, ಜರ್ಮನಿ ಸೇರಿ ಹಲವು ದೇಶಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 200 ರೂಪಾಯಿಗಿಂತ ಹೆಚ್ಚಿದೆ.