ನಡುರಸ್ತೆಯಲ್ಲಿಯೇ ಪರ್ಸಂಟೇಜ್ ಫಿಕ್ಸ್ ಮಾಡಿ ಸುದ್ದಿಯಾಗಿದ್ದ ಪಾಮನಕಲ್ಲೂರು ಪಿಡಿಓ ಅಮರೇಶರನ್ನು (PDO Amaresh) ಅಮಾನತು ಮಾಡಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ಆದೇಶ ಹೊರಡಿಸಿದ್ದಾರೆ.
ರಾಯಚೂರಿನ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯ ವಿವಿಧ ಕಾಮಗಾರಿಗಳಿಗೆ ಪಿಡಿಓ ಆಗಿದ್ದ ಅಮರೇಶ ಮೊಬೈಲ್ನಲ್ಲಿ ಪರ್ಸಂಟೇಜ್ ವ್ಯವಹಾರ ಕುದುರಿಸುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಲ್ಲದೇ, ಇದೇ ತಾಲೂಕಿನ ತೋರಣದಿನ್ನಿ ಪಂಚಾಯಿತಿಯಲ್ಲಿಯೂ ಪ್ರಭಾರಿ ಪಿಡಿಓ ಆಗಿ ಲೆಸ ಮಾಡುತ್ತಿದ್ದರೂ. ಎರಡೂ ಪಂಚಾಯಿತಿಗಳಲ್ಲಿ ಕರ್ತವ್ಯ ಲೋಪ ಹಾಗೂ ಉದ್ಯೋ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿದ್ದರು.
ನಡುರಸ್ತೆಯಲ್ಲಿ ಪರ್ಸಂಟೇಜ್ ವ್ಯವಹಾರದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕಾರಣ ಕೇಳಿ ನೊಟಿಸ್ ಜಾರಿ ಮಾಡಲಾಗಿತ್ತು. ಇದೀಗ, ನೋಟಿಸ್ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಪಿಡಿಓ ಅಮರೇಶರನ್ನು (PDO Amaresh) ಅಮಾನತುಗೊಳಿಸುವಂತೆ ರಾಯಚೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : FDA ನೌಕರಿ ಕೊಡಿಸುವ ಆಮಿಷ : PSI ಅಶ್ವಿನಿ ಅಮಾನತು