ಪ್ರಧಾನಮಂತ್ರಿ ಗಾದಿಗೆ ಇಮ್ರಾನ್ ಖಾನ್ ರಾಜೀನಾಮೆ ಬಳಿಕ ತೀವ್ರ ಸ್ವರೂಪದ ಆಂತರಿಕ ಕಲಹ ಎದುರಿಸುತ್ತಿರುವ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಬೆಲೆ ಲೀಟರ್‌ಗೆ 30 ರೂಪಾಯಿಯಷ್ಟು ಹೆಚ್ಚಳ ಆಗಿದೆ.
ಇವತ್ತು ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ 179.85 ರೂ. (ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 69 ರೂ.), ಡೀಸೆಲ್ ಲೀಟರ್‌ಗೆ 174 ರೂ.(ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 66.83 ರೂಪಾಯಿ), ಸೀಮೆಎಣ್ಣೆ ಲೀಟರ್‌ಗೆ 155 ರೂ. (ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 59.84 ರೂ.) ಮತ್ತು ಲಘು ಡೀಸೆಲ್ ಲೀಟರ್‌ಗೆ 148 ರೂಪಾಯಿಗೆ (ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 56.95 ರೂಪಾಯಿ) ಹೆಚ್ಚಳ ಆಗಿದೆ.
ನಿನ್ನೆಯಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ `ಲಾಹೋರ್ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂಗಳಲ್ಲಿ ದುಡ್ಡು ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟಿಸಿದ್ದರು.