ಪೆಟ್ರೋಲ್, ಡೀಸೆಲ್ ಬೆಲೆಗಳು ದಿನೇ ದಿನೇ ಗಗನಮುಖಿ ಆಗುತ್ತಿದ್ದೂ, ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇವತ್ತು ಕೂಡಾ ತೈಲ ಕಂಪನಿಗಳು ಮತ್ತೆ ದರ ಏರಿಕೆ ಮಾಡಿವೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 90 ಪೈಸೆ, ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 87 ಪೈಸೆ ಹೆಚ್ಚಳ ಆಗಿದೆ.
ಪರಿಣಾಮ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ Rs 106.51 ಆಗಿದ್ದರೆ, ಡೀಸೆಲ್ ಬೆಲೆ Rs 90.63 ರೂಪಾಯಿ ಆಗಿದೆ.
ಈ ಮೂಲಕ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 106 ರೂಪಾಯಿ ದಾಟಿದ್ದು, ಡೀಸೆಲ್ ಬೆಲೆ 90 ರೂಪಾಯಿಯ ಗಡಿ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿದ್ದರೂ ದೇಶಿಯವಾಗಿ ಮಾತ್ರ ತೈಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್ ನಾಳೆ ದೇಶದಲ್ಲಿ ಜಾಗಟೆ ಚಳವಳಿಗೆ ಕರೆ ನೀಡಿದೆ.