ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಘಾತ ನೀಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ. ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 3 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್ಗೆ 3 ರೂಪಾಯಿ 2 ಪೈಸೆಯಷ್ಟು ದುಬಾರಿಯಾಗಿದೆ.
ಪೆಟ್ರೋಲ್ ಮೇಲಿನ ವ್ಯಾಟ್ ತೆರಿಗೆಯನ್ನು ಈಗಿರುವ ಶೇಕಡಾ 25.92ರಿಂದ ಶೇಕಡಾ 29.84ಕ್ಕೆ ಏರಿಕೆ ಮಾಡಿದೆ. ಅಂದರೆ ಶೇಕಡಾ 3.92ರಷ್ಟು ಹೆಚ್ಚಳ ಮಾಡಿದೆ.
ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಶೇಕಡಾ 14.34ರಿಂದ ಶೇಕಡಾ 18.44ರಷ್ಟು ಹೆಚ್ಚಳ ಮಾಡಿದೆ. ಅಂದರೆ ಶೇಕಡಾ 5.90ರಷ್ಟು ಹೆಚ್ಚಳವಾಗಿದೆ.
ADVERTISEMENT
ADVERTISEMENT