ಒಂದು ವಾರದಲ್ಲಿ ಆರನೇ ಬಾರಿಗೆ ತೈಲ ಬೆಲೆ ಹೆಚ್ಚಿಸಲಾಗಿದೆ. ಪೈಸೆ ಪೈಸೆ ಲೆಕ್ಕದಲ್ಲೇ ತೈಲ ಬೆಲೆ ಹೆಚ್ಚಿಸುತ್ತಾ ಬಂದಿರುವ ಕೇಂದ್ರ ಸರ್ಕಾರ ಒಂದೇ ವಾರದಲ್ಲಿ ಜನಸಾಮಾನ್ಯರ ನಾಲ್ಕು ರೂಪಾಯಿ ಹೊರೆ ಹೇರಿದೆ.
ಇಂದು ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ, ಡೀಸೆಲ್ ಬೆಲೆಯಲ್ಲಿ 30ಪೈಸೆ ಹೆಚ್ಚಳ ಆಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ
Rs 104.81 ಆಗಿದ್ದರೆ, ಡೀಸೆಲ್ ಬೆಲೆ Rs 88.97 ರೂಪಾಯಿ ಆಗಿದೆ.
ದೆಹಲಿಯಲ್ಲಿ ಲೀ. ಪೆಟ್ರೋಲ್ Rs 99.4, ಡೀಸೆಲ್ ಬೆಲೆ Rs 90.77 ಆಗಿದೆ.
ಮುಂಬೈನಲ್ಲಿ ಲೀ. ಪೆಟ್ರೋಲ್ Rs 114.19, ಡೀಸೆಲ್ ಬೆಲೆ Rs 98.50 ಆಗಿದೆ.
ಚೆನ್ನೈನಲ್ಲಿ ಲೀ. ಪೆಟ್ರೋಲ್ Rs 105.18, ಡೀಸೆಲ್ ಬೆಲೆ Rs 95.33 ಆಗಿದೆ.
ಕೊಲ್ಕೋತಾದಲ್ಲಿ ಲೀ. ಪೆಟ್ರೋಲ್ Rs 108.85, ಡೀಸೆಲ್ ಬೆಲೆ Rs 93.35 ಆಗಿದೆ.
ಪೆಟ್ರೋಲ್, ಡೀಸೆಲ್ ಬೆಲೆಗಳ ನಿರಂತರ ಹೆಚ್ಚಳದ ಪರಿಣಾಮ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ನಿಧಾನಕ್ಕೆ ಹೆಚ್ಚಾಗುತ್ತಿದೆ. ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಆಗುತ್ತಿದೆ.