ಪೆಟ್ರೋಲ್, ಡೀಸೆಲ್ ಬೆಳೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ 9.5 ರೂ, ಡೀಸೆಲ್ 7 ರೂ ಅಬಕಾರಿ ಸುಂಕ ಕಡಿತಗೊಳಿಸಿದೆ.
ಅಬಕಾರಿ ಸುಂಕ ಕಡಿತ ಮಾಡಿರುವ ನಿರ್ಧಾರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಪೆಟ್ರೋಲ್ ಮೇಲೆ 9.5 ರೂ ಹಾಗೂ ಡೀಸೆಲ್ ಮೇಲೆ 7 ರೂ.ಗಳ ಕಡಿತ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಶನಿವಾರ ರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ.
ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾದ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಗಾಧ ಏರಿಕೆ ಕಂಡಿತ್ತು. ಇದೀಗ ದೇಶದಲ್ಲಿ ಸಗಟು ಹಣ ದುಬ್ಬರವೂ ಏರಿಕೆಯತ್ತ ಮುಖಮಾಡಿದೆ. ಇದರಿಂದ ಅಗತ್ಯ ಮೂಲವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ.
ದೇಶದಲ್ಲಿನ ಈ ಪರಿಸ್ಥಿತಿಯನ್ನು ಅವಲೋಕಿಸಿರುವ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿನ ಅಬಕಾರಿ ಸುಂಕ ಕಡಿತ ಮಾಡುವ ಮೂಲಕ ಅಲ್ಪಮಟ್ಟದಲ್ಲಾದರೂ ಸಗಟು ಹಣದುಬ್ಬರುವನ್ನು ನಿಯಂತ್ರಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಪ್ರಸ್ತುತ 111.09 ರೂ ಪೆಟ್ರೋಲ್ ಬೆಲೆಯಿದ್ದು, 94.79 ರೂ. ಡೀಸೆಲ್ ಬೆಲೆ ಇದೆ.