ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿ ದರ ಶೇಕಡಾ 8.1ಕ್ಕೆ ಇಳಿಕೆ ಆಗಿದೆ.
ಬಡ್ಡಿ ದರ ಇಳಿಸುವ ಕಾರ್ಮಿಕರ ಭವಿಷ್ಯ ನಿಧಿ ಸಂಘದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಈ ಮೂಲಕ ಭವಿಷ್ಯ ನಿಧಿ ಮೇಲೆ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರ ಪಾವತಿ ಆಗಲಿದೆ. 5 ಕೋಟಿ ಕಾರ್ಮಿಕರನ್ನು ಸದಸ್ಯರನ್ನಾಗಿ ಹೊಂದಿರುವ ಇಪಿಎಫ್ಒ ತನ್ನ ನಿರ್ಧಾರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಿತ್ತು.
1977-78ರಲ್ಲಿ ಭವಿಷ್ಯ ನಿಧಿ ಮೇಲೆ ಶೇಕಡಾ 8ರಷ್ಟು ಬಡ್ಡಿ ನೀಡಲಾಗುತ್ತಿತ್ತು.