ಕಾರ್ಮಿಕರ ಪಿಂಚಣಿ ನಿಧಿ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಪಿಎಫ್ ಮೇಲಿನ ಬಡ್ಡಿ ದರವನ್ನು ಶೇಕಡಾ 0.10ರಷ್ಟು ಹೆಚ್ಚಳ ಮಾಡಲಾಗಿದೆ. ಹೊಸ ಏರಿಕೆಯೊಂದಿಗೆ ಪಿಎಫ್ ಮೇಲೆ ಶೇಕಡಾ 8.25ರಷ್ಟು ಬಡ್ಡಿ ಸಿಗಲಿದೆ.
ಈ ಮೂಲಕ ಪಿಎಫ್ ಮೇಲೆ 13 ವರ್ಷಗಳ ಹಿಂದೆ ಪಡೆಯುತ್ತಿದ್ದ ಬಡ್ಡಿ ದರವೇ ಸಿಗಲಿದ್ದು, ಯುಪಿಎ ಸರ್ಕಾರದ 2013ರ ಅವಧಿಗೆ ಅವಧಿಯಲ್ಲಿ ಸಿಗುತ್ತಿದ್ದ ಬಡ್ಡಿದರಕ್ಕಿಂತ ಶೇಕಡಾ 0.50ರಷ್ಟು ಕಡಿಮೆ.
2021-22ರ ಸಾಲಿನಲ್ಲಿ ಪಿಎಫ್ ಮೇಲಿನ ಬಡ್ಡಿ ದರ ಶೇಕಡಾ 8.10ರಷ್ಟಿತ್ತು. 2022-23ರಲ್ಲಿ ಈ ಬಡ್ಡಿ ದರವನ್ನು ಶೇಕಡಾ 8.15ಕ್ಕೆ ಏರಿಕೆ ಮಾಡಲಾಗಿತ್ತು.
2020-21ರ ಅವಧಿಯಲ್ಲಿ ಶೇಕಡಾ 8.50ರಷ್ಟಿದ್ದ ಬಡ್ಡಿದವರನ್ನು 2022ರ ಮಾರ್ಚ್ನಲ್ಲಿ ಶೇಕಡಾ 8.10ಕ್ಕೆ ಇಳಿಸಲಾಗಿತ್ತು.
1977-78ರಿಂದಲೂ ಪಿಎಫ್ ಮೇಲಿನ ಬಡ್ಡಿ ಶೇಕಡಾ 8ಕ್ಕಿಂತ ಹೆಚ್ಚಿದೆ.
2018-19ರಲ್ಲಿ ಶೇಕಡಾ 8.65ರಷ್ಟಿದ್ದ ಪಿಎಫ್ ಉಳಿತಾಯ ಮೇಲಿನ ಬಡ್ಡಿ ದರವನ್ನು 2020ರ ಮಾರ್ಚ್ನಲ್ಲಿ ಶೇಕಡಾ 8.50ಗೆ ಇಳಿಸಲಾಗಿತ್ತು. ಇದು ಏಳು ವರ್ಷಗಳಲ್ಲೇ ಪಿಎಫ್ ಉಳಿತಾಯ ಖಾತೆಗಳ ಮೇಲೆ ನೀಡಲಾಗುತ್ತಿದ್ದ ಅತ್ಯಂತ ಕಡಿಮೆ ಬಡ್ಡಿದರವಾಗಿತ್ತು.
2016-17ರ ಅವಧಿಯಲ್ಲೂ ಪಿಎಫ್ ಮೇಲಿನ ಬಡ್ಡಿ ದರ ಶೇಕಡಾ 8.65ರಷ್ಟೇ ಇತ್ತು. 2017-18ರಲ್ಲಿ ಶೇಕಡಾ 8.55ರಷ್ಟಿತ್ತು. 2015-16ರ ಅವಧಿಯಲ್ಲಿ ಶೇಕಡಾ 8.8ರಷ್ಟಿತ್ತು.
2013-14ರ ಅಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಶೇಕಡಾ 8.75ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿತ್ತು. 2012-13ರ ಅವಧಿಯಲ್ಲಿ ಶೇಕಡಾ 8.5ರಷ್ಟು ಬಡ್ಡಿ ದರ ನೀಡಲಾಗಿತ್ತು. 2011-12ರ ಅವಧಿಯಲ್ಲಿ ಶೇಕಡಾ 8.25ರಷ್ಟು ಬಡ್ಡಿ ದರ ನೀಡಲಾಗುತ್ತಿತ್ತು.
ADVERTISEMENT
ADVERTISEMENT