ಯುಪಿಐ ( ಯೂನಿಪೈಡ್ ಪೇಮೆಂಟ್ ಇಂಟರ್ಪೇಸ್ ) ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದ್ದು, ತ್ವರಿತ ವರ್ಗವಣೆಗಾಗಿ ಯುಪಿಐ ಸೇವೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಬಗ್ಗೆ ಪ್ರಸ್ತಾಪಿಸಿದೆ. ಈ ಮೂಲಕ ಕ್ರೆಡಿಟ್ ಕಾರ್ಡ್ ಮೂಲಕವೂ ಪೋನ್ ಪೇ, ಗೂಗಲ್ ಪೇ, ಭೀಮ್, ಪೇಟಿಎಮ್ ಸೇರಿದಂತೆ ಹಲವು ಆ್ಯಪ್ಗಳ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ.
ಆರಂಭಿಕವಾಗಿ ರುಪೇ ಕ್ರೆಡಿಟ್ ಕಾರ್ಡ್ನಲ್ಲಿ ಈ ಸೇವೆ ಅರಂಭಿಸಲಾಗುವುದು. ಈ ವ್ಯವಸ್ಥೆ ಗ್ರಾಹಕರಿಂದ ಹಣ ವರ್ಗಾವಣೆಯಲ್ಲಿ ಹೆಚ್ಚಿನ ಅನುಕೂಲ ಹಾಗೂ ಮಾರ್ಗಗಳನ್ನು ಸೃಷ್ಠಿಸಲಿದೆ. ಅಗತ್ಯವಿರುವ ಸಿಸ್ಟಂ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಿಸ್ಟಂ ಅಭಿವೃದ್ಧಿಯಾದ ಮೇಲೆ ಈ ಸೇವೆ ಜನರಿಗೆ ಲಭ್ಯವಾಗಲಿದೆ ಎಂದು ಆರ್ಬಿಐ ಹೇಳಿದೆ.
ಅಗತ್ಯ ಸೂಚನೆಗಳನ್ನು ರಾಷ್ಟ್ರೀಯ ಪಾವತಿ ಆಯೋಗ ಪ್ರತ್ಯೇಕವಾಗಿ ನೀಡಲಿದೆ ಎಂದು ಇದೇ ವೇಳೆ ಹೇಳಿದರು.
ಪ್ರಸ್ತುತ, ಯುಪಿಐ ಸೇವೆ ಖಾತೆಗಳೊಂದಿಗೆ ಸಂಯೋಜನೆಯಾದ ಡೆಬಿಟ್ ಕಾರ್ಡ್ಗೆ(ATM) ಮಾತ್ರ ಈ ಸೌಲಭ್ಯ ನೀಡಲಾಗಿದೆ.
ಯುಪಿಐ ಭಾರತದ ಅತಿ ದೊಡ್ಡ ಅಂತರ್ಗತ ಹಣ ವರ್ಗಾವಣೆ ವ್ಯವಸ್ಥೆಯಾಗಿದೆ. ಈ ಸೇವೆಯಲ್ಲಿ 26 ಜನ ವೈಯಕ್ತಿಕ ಬಳಕೆದಾರರು ಹಾಗೂ 5 ಕೋಟಿ ಜನ ವ್ಯಾಪಾರಸ್ಥರು ನೋಂದಾಯಿಸಿಕೊಂಡಿದ್ದಾರೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಯುಪಿಐ ಅಡಿಯಲ್ಲಿ ಮೇ ತಿಂಗಳಲ್ಲಿ 594.63 ಕೋಟಿ ಹಣ ವರ್ಗಾವಣೆ ಪಾವತಿಗಳು, 10.40 ಲಕ್ಷ ಕೋ ರೂ. ಹಣ ವರ್ಗಾವಣೆಯಾಗಿದೆ.