ಮಂಗಳೂರು : ಸಮಾರಂಭವೊಂದರಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಕುಂದಾಪುರದ ಮನು ಹಂದಾಡಿ ಎಂಬುವವರು ಛಾಯಾಗ್ರಾಹಕರ ಕುರಿತಾಗಿ ಅವಹೇಳನಕಾರಿಯಾದ ಮಾತುಗಳನ್ನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಛಾಯಾಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.
ಹಾಸ್ಯಮಯ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಖ್ಯಾತಿಗೊಂಡಿದ್ದ ಮನು ಹಂದಾಡಿ ಅವರ ಛಾಯಾಗ್ರಾಹಕರ ಕುರಿತಾದ ಅವಹೇಳನಕಾರಿ ಮಾತುಗಳಿಂದ ಛಾಯಾಗ್ರಾಹಕರು ಆಕ್ರೋಶಗೊಂಡಿದ್ದಾರೆ.
ಈ ಬಗ್ಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ಇದರ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ ಅವರು ಪ್ರತಿಕ್ರಿಯೆ ನೀಡಿದ್ದು
ಅವಿಭಜಿತ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸದಸ್ಯ ಬಲವನ್ನು ನಮ್ಮ ಸಂಘಟನೆ ಹೊಂದಿದೆ. ಶಿಸ್ತಿಗೆ ಸಂಘಟನೆಯಲ್ಲಿ ಮೊದಲ ಆದ್ಯತೆ ನೀಡುತ್ತಿದ್ದು, ವೃತ್ತಿಯನ್ನು ಬಹಳ ಗೌರವಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ವೇದಿಕೆಯಲ್ಲಿ ಭಾಷಣ ಮಾಡುವಾಗ ಈ ರೀತಿಯಾಗಿ ಒಂದು ವೃತ್ತಿಯ ಕುರಿತಾಗಿ ನಿಂದನಾರ್ಹವಾಗಿ ಮಾತನಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಮನು ಹಂದಾಡಿ ಅವರು ಸಮಸ್ತ ಛಾಯಾಗ್ರಾಹಕರಲ್ಲಿ ತನ್ನ ವಿವಾದಾತ್ಮಕ ಮಾತುಗಳಿಗಾಗಿ ಕ್ಷಮೆ ಯಾಚಿಸಬೇಕೆಂದು