ADVERTISEMENT
ಚಾಮರಾಜನಗರದಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಕಿರಣ್ ತರಬೇತಿ ವಿಮಾನ ಪತನಗೊಂಡಿದೆ.
ಕೆ.ಮೂಕಹಳ್ಳಿ ಹೊರವಲಯದಲ್ಲಿ ಲಘು ವಿಮಾನ ಪತನಗೊಂಡಿದ್ದು ವಿಮಾನದಲ್ಲಿ ಇಬ್ಬರು ಪೈಲಟ್ಗಳಿದ್ದರು.
ಬೆಂಗಳೂರಿನ ಹೆಚ್ಎಎಲ್ನಿಂದ ಈ ತರಬೇತಿ ವಿಮಾನದ ಎಂದಿನಂತೆ ಹಾರಾಟ ನಡೆಸಿತ್ತು. ವಿಮಾನದಲ್ಲಿದ್ದ 43 ವರ್ಷದ ತೇಜ್ಪಾಲ್ ಮತ್ತು 30 ವರ್ಷದ ಭೂಮಿಕಾ ಅಪಾಯದಿಂದ ಪಾರಾಗಿದ್ದಾರೆ.
ಚಾಮರಾಜನಗರದಿಂದ ವಾಪಸ್ ಹೋಗುವ ವೇಳೆ ವಿಮಾನ ಪತನವಾಗಿದೆ.
ಪತನ ಸಂಬಂಧ ವಾಯುಸೇನೆ ತನಿಖೆಗೆ ಆದೇಶಿಸಿದೆ.
ಯು692 ಹೆಸರಿನ ಕಿರಣ್ ಲಘು ವಿಮಾನ ಪತನಗೊಂಡಿದೆ. ವಿಮಾನ ಪತನಗೊಂಡ ರಭಸಕ್ಕೆ ವಿಮಾನದ ಇಂಜಿನ್, ರೆಕ್ಕೆಗಳೆಲ್ಲವೂ ಛಿದ್ರವಾಗಿವೆ.
ಕಿರಣ್ ಇದು ಹೆಚ್ಎಎಲ್ ನಿರ್ಮಿತ ಎರಡು ಆಸನಗಳ ತರಬೇತಿ ವಿಮಾನವಾಗಿದೆ. 11 ಮೀಟರ್ ಉದ್ದ ಇರುವ ಈ ಲಘು ವಿಮಾನವನ್ನು ವಾಯುಸೇನೆಯ ಕೋರಿಕೆಯ ಮೇರೆಗೆ ಹೆಚ್ಎಎಲ್ ನಿರ್ಮಿಸಿದೆ.
ಈ ವಿಮಾನ ಗಂಟೆಗೆ 693 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, 2560 ಕೆಜಿಯಷ್ಟು ಭಾರವಿದೆ.
ADVERTISEMENT