ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಈ ಹೊಸ ವರ್ಷದ ಮೊದಲ ಕಂತು ಜಮೆಯಾಗಲಿದೆ. ಫೆಬ್ರವರಿಯಲ್ಲಿ ವರ್ಷದ ಮೊದಲ ಕಂತು ಜಮೆಯಾಗಲಿದೆ. ಆದರೆ ನಿರ್ದಿಷ್ಟ ದಿನಾಂಕವನ್ನು ಇನ್ನೂ ಸರ್ಕಾರ ನಿಗದಿಪಡಿಸಿಲ್ಲ. ಈ ಮೂಲಕ ಮುಂದಿನ ತಿಂಗಳು ಯೋಜನೆಯ 19ನೇ ಕಂತು ರೈತರ ಖಾತೆಗಳಿಗೆ ಜಮೆಯಾಗಲಿದೆ.
2019ರ ಫೆಬ್ರವರಿ ಬಜೆಟ್ನಲ್ಲಿ ಘೋಷಣೆ ಮಾಡಲಾದ ಈ ಯೋಜನೆ ಮೂಲಕ ವರ್ಷದಲ್ಲಿ ಪ್ರತಿ ನಾಲ್ಕು ತಿಂಗಳಿಗೆ ಒಂದು ಬಾರಿ 2 ಸಾವಿರ ರೂಪಾಯಿಗಳಂತೆ ವರ್ಷಕ್ಕೆ 6 ಸಾವಿರ ರೂಪಾಯಿಯನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.
ಅರ್ಹ ಸಣ್ಣ ಮತ್ತು ಮಧ್ಯಮ ರೈತರಿಗಷ್ಟೇ ಯೋಜನೆಯ ಲಾಭ ಸಿಗಬೇಕು ಎಂಬ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಅತ್ಯಂತ ಕಠಿಣವಾದ ನಿಯಮಗಳನ್ನು ಅಳವಡಿಸಿದೆ. ಭೂದಾಖಲೆಗಳು ಅಂದರೆ ಪಹಣಿಗೆ ಭೂ ಮಾಲೀಕರ ಆಧಾರ್ ಜೋಡಣೆ, ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಆಗಿರುವ ಪ್ಯಾನ್ನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಹಣವನ್ನು ಪಡೆಯುವುದಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.
ಡಿಸೆಂಬರ್ 3ರಂದು ಕೇಂದ್ರ ಸರ್ಕಾರವೇ ಕೊಟ್ಟಿರುವ ಮಾಹಿತಿ ಪ್ರಕಾರ ʻಅನರ್ಹ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಪಡೆದಿರುವ 335 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ವಸೂಲಿ ಮಾಡಿದೆʼ. ಅಂದರೆ ಅನರ್ಹ ರೈತರು ತಾವು ಪಡೆದಿರುವ ಕಿಸಾನ್ ಸಮ್ನಾನ್ ನಿಧಿ ಮೊತ್ತವನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ವಾಪಸ್ ಕೊಟ್ಟಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈ ಕೆಳಗಿನ ರೈತರಿಗೆ ಈ ಯೋಜನೆಯಡಿಯಲ್ಲಿ ಹಣ ಸಿಗಲ್ಲ:
-
ದೊಡ್ಡ ಹಿಡುವಳಿ ಹೊಂದಿರುವ ರೈತರು
-
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರಾಗಿರುವ ರೈತರು ಅಥವಾ ಆ ನೌಕರರು ಇರುವ ರೈತ ಕುಟುಂಬಗಳು
-
ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿಗಿಂತ ಅಧಿಕ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರಿರುವ ರೈತ ಕುಟುಂಬಗಳು
-
ಆದಾಯ ತೆರಿಗೆ ಪಾವತಿಸುವ ರೈತ ಕುಟುಂಬಗಳು
-
ಸಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಕುಟುಂಬ ಸದಸ್ಯರಾಗಿರುವ ರೈತ ಕುಟುಂಬಗಳು
-
ನಗರ ಸ್ಥಳೀಯ ಸಂಸ್ಥೆಗಳ ನಿವೃತ್ತ ಮತ್ತು ಹಾಲಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು
ADVERTISEMENT
ADVERTISEMENT