ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಅಹಮದಾಬಾದ್ನಲ್ಲಿ ಒಂದೇ ಬಾರಿಗೆ 10 ಹೊಸ ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಪ್ರಧಾನಿ ಮೋದಿ ಈ ಭೇಟಿಯು ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ , ಸಂಪರ್ಕ ಮತ್ತು ಪೆಟ್ರೋಕೆಮಿಕಲ್ ವಲಯವನ್ನು ಉತ್ತೇಜಿಸುವ ಸಲುವಾಗಿದೆ. ಪ್ರಧಾನಿ ಮೋದಿ ಅವರು ರೈಲ್ವೆ ವರ್ಕ್ಶಾಪ್ಗಳು, ಲೋಕೋ ಶೆಡ್ಗಳು ಮತ್ತು ಪಿಟ್ಲೈನ್ಗಳು/ಕೋಚಿಂಗ್ ಡಿಪೋಗಳು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.
ವರ್ಚ್ಯುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಮಾರ್ಗಗಳಾದ ಲಕ್ಷ್ಮೀ-ಡೆಹ್ರಾಡೂನ್ ವಂದೇ ಭಾರತ್ ಜೊತೆಗೆ ಪಾಟ್ನಾ-ಲಕ್ಷ್ಮೀ, ನ್ಯೂ ಜಗುರಿ-ಪಾಟ್ನಾ, ಪುರಿ- ವಿಶಾಖಪಟ್ಟಣಂ, ಕಲಬುರಗಿ-ಬೆಂಗಳೂರು, 5023- ವಾರಣಾಸಿ, ಮತ್ತು ಖಜುರಾಹೊ-ದೆಹಲಿ, ಅಹಮದಾಬಾದ್-ಮುಂಬೈ, ಸಿಕಂದರಾಬಾದ್- ವಿಶಾಖಪಟ್ಟಣಂ ಮತ್ತು ಮೈಸೂರು-ಚೆನ್ನೈ ಮಾರ್ಗಗಳ ರೈಲುಗಳಿಗೆ ಚಾಲನೆ ನೀಡಿದ್ದಾರೆ.
ಪ್ರತಿ ದಿನದ ರೈಲು ಸಂಚಾರ (ಬುಧವಾರ ಹೊರತುಪಡಿಸಿ) ಏಪ್ರಿಲ್ ಐದರಿಂದ ಆರಂಭವಾಗಲಿದೆ. ಈ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಹಿಂದಿನ ಬಿಳಿ ಮತ್ತು ನೀಲಿ ಬಣ್ಣಕ್ಕಿಂತ ಭಿನ್ನವಾಗಿ ಕಿತ್ತಳೆ ಮತ್ತು ಬಿಳಿ ಬಣ್ಣಗಳಲ್ಲಿ ಇರಲಿದೆ. 2022ರ ನವೆಂಬರ್ನಲ್ಲಿ, ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ಮಧ್ಯೆ ಸಂಚರಿಸುವ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದೀಗ ಮತ್ತೊಂದು ರೈಲಿಗೆ ಚಾಲನೆ ನೀಡಿದ್ದಾರೆ.