ADVERTISEMENT
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಮೆಲೋನಿ ಅವರು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟ್ಟರ್)ನಲ್ಲಿ ಹಂಚಿಕೊಂಡಿದ್ದಾರೆ.
ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಸ್ನೇಹಿತರ ಭೇಟಿ ಎಂದು ಬರೆದುಕೊಂಡಿರುವ ಮೆಲೋನಿ ಅವರು ಮೆಲೋನಿ ಹೆಸರಿನ ತಮ್ಮ ಮೊದಲೆರಡು ಅಕ್ಷರ ಮೆಲೋ ಮತ್ತು ಮೋದಿ ಹೆಸರಿನ ಕೊನೆಯಕ್ಷರ ದಿ (ಮೆಲೋದಿ) ಎಂದು ಬರೆದುಕೊಂಡಿದ್ದಾರೆ.
ಇಟಲಿ ಪ್ರಧಾನಿ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಸ್ನೇಹಿತರನ್ನು ಭೇಟಿಯಾಗುವುದು ಯಾವತ್ತೂ ಸಂತೋಷಕರ ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದುಬೈನಲ್ಲಿ ಹವಾಮಾನ ಬದಲಾವಣೆ ಶೃಂಗಸಭೆ ನಡೆಯುತ್ತಿದೆ.
ADVERTISEMENT