ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಜಯರಾಮ್ದೇವ್ ಗೌಡ ಅವರನ್ನು ವರ್ಗಾಯಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಜ್ಮತ್ ಅಲಿ ಅವರನ್ನು ವರ್ಗಾಯಿಸಲಾಗಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆ (ಕದ್ರಿ) ಪೊಲೀಸ್ ಇನ್ಸ್ಪೆಕ್ಟರ್ ಆಗಿ ಪಣಂಬೂರು ಠಾಣೆ ಪಿಐ ಆಗಿದ್ದ ಸೋಮಶೇಖರ್ ಜೆ ಸಿ ಅವರನ್ನು ವರ್ಗಾಯಿಸಲಾಗಿದೆ.
ಕದ್ರಿ ಠಾಣೆ ಪಿಐ ಆಗಿದ್ದ ಅನಂತಪದ್ಮನಾಭ ಕೆ ವಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆ ಪಿಐ ಆಗಿದ್ದ ಸುರೇಶ್ ಕುಮಾರ್, ಕದ್ರಿ ಠಾಣೆ ಪಿಐ ಆಗಿದ್ದ ರಾಘವೇಂದ್ರ ಎಂ ಬೈಂದೂರು ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಮಂಗಳೂರು ನಗರ ಸಿ ಟಿ ಎಸ್ಬಿಯಲ್ಲಿ ಪಿಐ ಆಗಿದ್ದ ಮಹಮ್ಮದ್ ಷರೀಫ್ ಅವರನ್ನು ಮಂಗಳೂರು ಉತ್ತರ ಸಂಚಾರ ಠಾಣೆ ಪಿಐ ಆಗಿ ವರ್ಗಾಯಿಸಲಾಗಿದೆ.
ಆಂತರಿಕ ಗುಪ್ತಚರ ದಳದಲ್ಲಿದ್ದ ಸಂದೇಶ್ ಪಿ ಜಿ ಅವರನ್ನು ಮೂಡಬಿದ್ರೆ ಪೊಲೀಸ್ ಠಾಣೆ ಪಿಐ ಆಗಿ ವರ್ಗಾಯಿಸಲಾಗಿದೆ.
ಉಡುಪಿ ಜಿಲ್ಲೆಯ ಕಾಪು ವೃತ್ತದ ಪಿಐ ಆಗಿದ್ದ ಪೂವಯ್ಯ ಕೆ ಸಿ ಅವರನ್ನು ಮೈಸೂರು ನಗರ ಸಿಸಿಬಿ-2 ಪೊಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾಯಿಸಲಾಗಿದೆ.
ಬಜ್ಪೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ನಿರಂಜನ್ ಕುಮಾರ್ ಅವರನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾಯಿಸಲಾಗಿದೆ.
ADVERTISEMENT
ADVERTISEMENT