ಇವತ್ತು ವರಮಹಾಲಕ್ಷ್ಮೀ ಹಬ್ಬ. ಈ ಹಿನ್ನೆಲೆಯಲ್ಲಿ ತಮ್ಮಮ್ಮ ಮನೆಯಲ್ಲಿರುವ ಆಭರಣ ಮತ್ತು ಹಣವನ್ನು ಲಕ್ಷ್ಮೀ ಚಿತ್ರದ ಮುಂದೆ ಇಟ್ಟು ಪೂಜೆ ಮಾಡುವುದು ವಾಡಿಕೆ.
ಆದರೆ ಈ ರೀತಿ ಪೂಜೆ ವೇಳೆ ಬಂಗಾರ ಮತ್ತು ಹಣ ಇಟ್ಟಿರುವ ಚಿತ್ರಗಳನ್ನು ಫೇಸ್ಬುಕ್ ಅಥವಾ ವಾಟ್ಸಾಪ್ ಸೇರಿದಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಪೊಲೀಸರು ಆಟೋದಲ್ಲಿ ಕೂತು ಜನಸಾಮಾನ್ಯರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಅಲ್ಲದೇ ಹಬ್ಬದ ಖುಷಿಯಲ್ಲಿ ಮೈಮೇಲೆ ಆಭರಣ ಧರಿಸಿ ಒಬ್ಬಂಟಿಯಾಗಿ ಓಡಾಡದಂತೆ ಸಲಹೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗುವ ಫೋಟೋಗಳನ್ನೇ ಬಳಸಿ ಕಳ್ಳರು, ದರೋಡೆಕೋರರು ಹೊಂಚು ಹಾಕಬಹುದಾದ ಹಿನ್ನೆಲೆಯಲ್ಲಿ ಎಚ್ಚರಿಕೆ ಸಂದೇಶ ನೀಡಲಾಗಿದೆ.