ಹೊರ ರಾಜ್ಯದಿಂದ ಬಂದು ಕನ್ನಡ ಕಲಿತು ಕನ್ನಡಿಗರ ಮನಸ್ಸು ಗೆದ್ದಿರುವ ನಟಿ ಪೂಜಾ ಗಾಂಧಿ ಅವರು ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ನಾಳೆ ಮಂತ್ರ ಮಾಂಗಲ್ಯ ಆಗುತ್ತಿದ್ದಾರೆ.
೪೦ ವರ್ಷದ ಪೂಜಾ ಗಾಂಧಿ ಅವರು ನಾಳೆ ವಿಜಯ್ ಘೋರ್ಪಡೆಯವರೊಂದಿಗೆ ಮದುವೆ ಆಗುತ್ತಿದ್ದಾರೆ.
ತಮ್ಮ ಮದುವೆ ಬಗ್ಗೆ ಕನ್ನಡದಲ್ಲೇ ತಾವೇ ಕಾಗದಲ್ಲಿ ಬರೆದರು ಆಮಂತ್ರಣ ಪತ್ರಿಕೆ ಹಂಚಿಕೊಂಡು ಕನ್ನಡಿಗರ ಮನಸ್ಸನ್ನು ಮತ್ತಷ್ಟು ಗೆದ್ದಿದ್ದಾರೆ ಪೂಜಾ ಗಾಂಧಿ.
ತಮ್ಮ ಮದುವೆ ಮಾಧ್ಯಮಗಳ ಕ್ಯಾಮರಾಗಳಿಗೆ ಅವಕಾಶವಿರುವುದಿಲ್ಲ, ಅನ್ಯಥಾ ಭಾವಿಸಬೇಡಿ ಎಂದು ಪೂಜಾ ಗಾಂಧಿ ಹೇಳಿದ್ದಾರೆ.
ಪ್ರೀತಿಯ ಮಾಧ್ಯಮ ಮಿತ್ರರಿಗೆ
ಆತ್ಮೀಯರೇ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು, ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಯಾಗಿದ್ದೀರಿ.
ನವೆಂಬರ್೨೯-೧೧-೨೦೨೩ನೇ ತಾರೀಕು ಸಂಜೆ ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ, ಆರ್ಶೀವದಿಸಿ.
ತಮ್ಮನಲ್ಲಿ ನನ್ನ ಸವಿನಯ ಮನವಿ:
ಮದುವೆ ಸಮಯದಲ್ಲಿ ಯಾವುದೇ ಕ್ಯಾಮರಾಗಳಿಗೆ ಅವಕಾಶವಿರುವುದಿಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಫೋಟೋಗಳನ್ನು ಮತ್ತು ದೃಶ್ಯಗಳನ್ನು ತಲುಪಿಸುತ್ತೇವೆ.
ಮದುವೆ ಸಮಯ ಮತ್ತು ಸ್ಥಳವನ್ನು ನಾಳೆ ೨೯-೧೧-೨೦೨೩ರ ಬೆಳಗ್ಗೆ ನಮ್ಮ ಪಿಆರ್ಒ ಸುಧೀಂದ್ರ ವೆಂಕಟೇಶ್ ಅವರು ತಿಳಿಸುತ್ತಾರೆ.
ಈ ಶುಭಸಂದರ್ಭದಲ್ಲಿ ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು.
ನಿಮ್ಮ ಮನೆಮಗಳು ಪೂಜಾಗಾಂಧಿ
ADVERTISEMENT
ADVERTISEMENT