ನಟಿ ಪೂನಂ ಪಾಂಡೆ ಜೀವಂತವಾಗಿದ್ದಾಳೆ. ಆಕೆ ನಿಧನವಾಗಿಲ್ಲ. ಈ ಬಗ್ಗೆ ಅರ್ಧ ಗಂಟೆಗೆ ಮೊದಲಷ್ಟೇ ಆಕೆಯೇ ದೃಶ್ಯ ಹೇಳಿಕೆ ಬಿಟ್ಟಿದ್ದಾಳೆ.
ನಾನು ಇಲ್ಲೊಂದು ಮಹತ್ವದ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇಮೆ. ನಾನು ಇಲ್ಲಿದ್ದೇನೆ, ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ಪಡೆದಿಲ್ಲ. ಆದರೆ ವಿಷಾದಯನೀಯವಾಗಿ ಆ ರೋಗದ ಬಗ್ಗೆ ಮಾಹಿತಿ ಇಲ್ಲದೇ ಸಾವಿರಾರು ಮಹಿಳೆಯರು ಅದಕ್ಕೆ ಬಲಿಯಾಗುತ್ತಿದ್ದಾರೆ. ಉಳಿದ ಕ್ಯಾನ್ಸರ್ಗಿಂತ ಗರ್ಭಕಂಠದ ಕ್ಯಾನ್ಸರ್ನ್ನೂ ತಡೆಯಬಹುದು. ಹೆಚ್ಪಿವಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಆರಂಭದಲ್ಲೇ ಪತ್ತೆ ಹಚ್ಚುವುದು ಮುಖ್ಯ. ಈ ರೋಗಕ್ಕೆ ಯಾರೂ ಬಲಿ ಆಗಬಾರದು ಎನ್ನುವುದು ನಮ್ಮ ಉದ್ದೇಶ. ಮಹಿಳೆಯರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಒಬ್ಬರು ಇನ್ನೊಬ್ಬರಿಗೆ ಹೇಳುವ ಮೂಲಕ ಜಾಗೃತಿ ಮೂಡಿಸೋಣ. ಈ ರೋಗದ ಗಂಡಾಂತರವನ್ನು ತಪ್ಪಿಸೋಣ
ಎಂದು ಪೂನಂ ಪಾಂಡೆ ಬರೆದುಕೊಂಡಿದ್ದಾಳೆ.
ಗರ್ಭಕಂಠದ ಕ್ಯಾನ್ಸರ್ಗೆ ಪೂನಂ ಪಾಂಡೆ ಸಾವನ್ನಪ್ಪಿದ್ದಾಳೆ ಎಂದು ನಿನ್ನೆ ಆಕೆಯ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಲಾಗಿತ್ತು.