ಬಹುಭಾಷಾ ನಟ ಪ್ರಕಾಶ್ ರಾಜ್ ಇಂದು ದಿವಂಗತ ಡಾ.ಪುನೀತ್ ರಾಜ್ಕುಮಾರ್ ಅವರ ನೆನಪಿನಾರ್ಥವಾಗಿ ಪ್ರಕಾಶ್ ರಾಜ್ ಪೌಂಡೇಶನ್ನಿಂದ ‘ಅಪ್ಪು ಎಕ್ಸ್ಪ್ರೆಸ್’ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಷನ್ ಆಸ್ಪತ್ರೆಗೆ ಪ್ರಕಾಶ್ ರಾಜ್ ಆ್ಯಂಬುಲೆನ್ಸ್ ಅನ್ನು ಸಮರ್ಪಣೆ ಮಾಡಿದರು.
ಈ ಬಗ್ಗೆ ಮಾತನಾಡಿರುವ ನಟ ಪ್ರಕಾಶ್ ರಾಜ್, ನಾವು ಇಲ್ಲಿ ಸೇರಲು ಕಾರಣ ಅಪ್ಪು. ಆಗ ಆ್ಯಂಬುಲೆನ್ಸ್ ಇದ್ದಿದ್ದರೆ ಅಪ್ಪು ಉಳಿದು ಬಿಡುತ್ತಿದ್ದರು ಎಂದು ಅನಿಸಿತು. ಅದಕ್ಕಾಗಿ ಅಪ್ಪು ಹೆಸರಲ್ಲಿ ಆ್ಯಂಬುಲೆನ್ಸ್ ನೀಡಲು ನಿರ್ಧಾರ ಮಾಡಿದ್ದೇನೆ.
ಇದು ಕೇವಲ ಆರಂಭ ಮುಂದೆ 32 ಆ್ಯಂಬುಲೆನ್ಸ್ ಎಲ್ಲಾ ಜಿಲ್ಲೆಗಳಿಗೆ ನೀಡುತ್ತೇನೆ. ಅಪ್ಪು ಹೆಸರಲ್ಲಿ ಸಹಾಯ ಕೇಳಲು ನನಗೆ ಯಾವುದೇ ಮುಜುಗರ ಇಲ್ಲ. ಮಿಷನ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಕೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ ಸದ್ಯದಲ್ಲೇ ಅಪ್ಪು ಹೆಸರಿನಲ್ಲಿ ಬ್ಲಡ್ ಬ್ಯಾಂಕ್ ಆರಂಭವಾಗುತ್ತದೆ. ಈ ಮೂಲಕ ಅಪ್ಪು ಕೆಲಸಗಳಿಗೆ ಧನ್ಯವಾದ ಹೇಳುವ ಕೆಲಸ ಅಷ್ಟೇ. ಜಾತಿ, ಭಾಷೆ, ಧರ್ಮವನ್ನು ಮೀರಿ ಕೆಲಸ ಮಾಡೋಣ.
ಕೊರೋನಾ ಕಾಲದಲ್ಲಿ ನಾವು ಹಲವು ಕಾರ್ಯ ಮಾಡುತ್ತಿದ್ದೆ. ನಾನು ನಿಮ್ಮ ಫೌಂಡೇಶನ್ಗೆ ಸಹಾಯ ಮಾಡಬೇಕು ಅಂತಾ 2 ಲಕ್ಷ ನೀಡಿದ್ದರು ಎಂದು ಅಪ್ಪು ಕಾರ್ಯವನ್ನು ಪ್ರಕಾಶ್ ರಾಜ್ ಸ್ಮರಿಸಿದರು.
ಈ ಕಾರ್ಯಕ್ರಮದ ವೇಳೆ ನಿರ್ದೇಶಕ ಸಂತೋಷ್ ಆನಂದ್ರಾಮ್ ಜೊತೆಯಲ್ಲಿದ್ದರು. ಅವರೂ ಪುನೀತ್ ರಾಜ್ಕುಮಾರ್ ಅವರ ಸೇವಾ ಕಾರ್ಯಗಳನ್ನು ಸ್ಮರಿಸಿಕೊಂಡರು.