ADVERTISEMENT
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿರುವ ಉಡುಪಿ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು 2018ರವರೆಗೆ ಇದ್ದ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ್ದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಉಡುಪಿಯಲ್ಲಿ ಸರ್ಕಾರಿ ಜಿಮ್ ಶುರುವಾಗಿದೆ. ಈ ಜಿಮ್ಗೆ ಅಮೆರಿಕದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಸಾಮಾನ್ಯ ಶುಲ್ಕ ಪಾವತಿಸಿ ಜನ ಇದನ್ನು ಬಳಸಿಕೊಳ್ಳಿ
ಎಂದು ಹೊಗಳಿ ವಿಸಿಟ್ ಉಡುಪಿ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಾಕಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ತಾವು ಸಚಿವರಾಗಿ ಈ ಜಿಮ್ನ ಆರಂಭಕ್ಕೆ ನೀಡಿದ್ದ ಅನುದಾನದ ಬಗ್ಗೆ ನೆನೆಪಿಸಿಕೊಂಡಿದ್ದಾರೆ.
ಇದು ಅತ್ಯಂತ ರಾಜ್ಯದಲ್ಲಿ ಆರಂಭವಾದ ಅತ್ಯಂತ ಸೌಲಭ್ಯವುಳ್ಳ ಜಿಮ್. ನಾನು ಕ್ರೀಡಾ ಸಚಿವನಾಗಿದ್ದಾಗ ಉಡುಪಿ ಯುವ ಜನತೆಗಾಗಿ ಅಗ್ಗದ ವೆಚ್ಚದಲ್ಲಿ ಈ ಜಿಮ್ ಆರಂಭಿಸಿದ್ದೆ. ನಾನು 2 ಕೋಟಿ ರೂಪಾಯಿ ಅನುದಾನ ನೀಡಿದ್ದೆ ಜೊತೆ ಎಸಿಯನ್ನೂ ಕೂಡಾ ನನಗೆ ಚೆನ್ನಾಗಿ ನೆನೆಪಿರುವ ಹಾಗೆ..
ಎಂದು ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪ್ರಮೋದ್ ಮಧ್ವರಾಜ್ ಅವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದರು.
ADVERTISEMENT