ಗುಜರಾತ್ ಮತ್ತು ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಹೊಸ ಬದಲಾವಣೆಗೆ ಸಲಹೆಗೆ ನೀಡಿರುವ ಉದಯಪುದಲ್ಲಿ ನಡೆದಿದ್ದ ಕಾಂಗ್ರೆಸ್ ಚಿಂತನಾ ಶಿಬಿರದ ಬಗ್ಗೆ ಪ್ರಶಾಂತ್ ಕಿಶೋರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
`ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದ ಫಲಶ್ರುತಿ ಏನು ಎಂದು ಹಲವರು ನನ್ನ ಬಳಿ ಕೇಳಿದ್ದಾರೆ.’
`ನನ್ನ ಅಭಿಪ್ರಾಯದಲ್ಲಿ ಈಗಿರುವ ಸ್ಥಿತಿಯನ್ನು ಇನ್ನಷ್ಟು ದಿನ ಎಳೆಯುವುದು ಮತ್ತು ನಾಯಕತ್ವಕ್ಕೆ ಇನ್ನಷ್ಟು ಸಮಯ ಕೊಡುವುದು, ಕನಿಷ್ಠ ಪಕ್ಷ ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ನೆಲ ಕಚ್ಚುವರೆಗೆ ಬಿಟ್ಟರೆ ಆ ಚಿಂತನಾಶಿಬಿರದಿAದ ಅರ್ಥಪೂರ್ಣವಾದದ್ದು ಏನೂ ಸಾಧಿಸಲಾಗಿಲ್ಲ’.
ಪ್ರಶಾಂತ್ ಕಿಶೋರ್ ಅವರ ಈ ಅಭಿಪ್ರಾಯ ಸಾಕಷ್ಟು ಮಹತ್ವ ಪಡೆದಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಮತ್ತು ೨೦೨೪ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟಕೊಂಡು ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಒಂದಷ್ಟು ಸಲಹೆಗಳನ್ನು ನೀಡಿದ್ದರು. ಗುಜರಾತ್ನಲ್ಲಿ ಕಾಂಗ್ರೆಸ್ ರಣತಂತ್ರಗಳ ಜಾರಿಗೆ ಮುಕ್ತ ಅವಕಾಶ ನೀಡಬೇಕೆಂದು ಕೇಳಿದ್ದರು. ಆದರೆ ಪಕ್ಷಕ್ಕೆ ಸೇರ್ಪಡೆ ಆಗುವಂತೆ ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಆಗ್ರಹಿಸಿದ್ದರು. ಆದ್ರೆ ಪ್ರಶಾಂತ್ ಕಿಶೋರ್ ಆ ಷರತ್ತು ಒಪ್ಪಿಕೊಂಡಿರಲಿಲ್ಲ.