ಹಾವು ಅಂದರೇನೆ ಭಯ. ಕಂಡರೇ ಮಾರು ದೂರು ಓಡುತ್ತೇವೆ. ಕೆಲವರು ಕೊಲ್ಲಲು ಕೂಡ ನೋಡುತ್ತಾರೆ. ಮಳೆಗಾಲದಲ್ಲಿ ಹಾವುಗಳು ಹೊರಗೆ ಕಾಣಿಸಿಕೊಳ್ಳುವುದು ಹೆಚ್ಚು. ಆಕಸ್ಮಾತ್ ಆಗಿ ಹಾವು ಕಡಿದಲ್ಲಿ ಏನು ಮಾಡಬೇಕು ಎಂದು ವೈದ್ಯರು ಹಲವು ಸೂಚನೆ ನೀಡಿದ್ದಾರೆ. ಅವು ಏನು ಎಂಬುದನ್ನು ನೋಡಿ.
* ಹೊಲ, ತೋಟ, ಬಯಲು.. ಹೀಗೆ ಎಲ್ಲಿಯೇ ಆಗಲಿ ಹಾವು ಕಚ್ಚಿದಾಗ ಷಾಕ್ಗೆ ಗುರಿ ಆಗುವವರೇ ಹೆಚ್ಚು. ತಕ್ಷಣ ಏನು ಮಾಡಬೇಕೆಂದು ಗೊತ್ತಾಗದೇ ಆತಂಕದಲ್ಲಿ ಕಾಲಹರಣ ಮಾಡುವವರೇ ಹೆಚ್ಚು. ಇದರಿಂದಾಗಿ ಶರೀರಕ್ಕೆಲ್ಲಾ ವಿಷ ವ್ಯಾಪಿಸುತ್ತದೆ. ಕೊನೆಗೆ ಪ್ರಾಣ ಹೋಗುತ್ತದೆ.
* ಕಚ್ಚಿರುವುದು ವಿಷ ಸರ್ಪ ಅಲ್ಲದೇ ಇದ್ದರೂ ಧೈರ್ಯ ಕಳೆದುಕೊಂಡೇ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಹಾವು ಕಡಿತಕ್ಕೆ ಒಳಗಾದವರು ಧೈರ್ಯವಾಗಿ ಇರಬೇಕು. ಗಾಬರಿ ಆಗಬಾರದು.
* ಹಾವು ಕಚ್ಚಿದ ಜಾಗವನ್ನು ಸೋಪುನೀರು ಅಥವಾ ಆಂಟಿಸೆಪ್ಟಿಕ್ ಲೋಷನ್ನಿಂದ ಸ್ವಚ್ಛ ಮಾಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಆ ಭಾಗವನ್ನು ಕದಲಿಸದಂತೆ ನೋಡಿಕೊಳ್ಳಬೇಕು.
* ನೋವು ಶಮನಕ್ಕೆ ಯಾವುದೇ ಔಷಧಿ ಬಳಸಬಾರದು. ಬದಲಿಗೆ ಹಾವು ಕಚ್ಚಿದ ಜಾಗದಲ್ಲಿ ಐಸ್ ಕ್ಯೂಬ್ ಇಡುವುದು ಒಳ್ಳೆಯದು.
* ಹಾವು ಕಚ್ಚಿದ ಜಾಗದಲ್ಲಿ ಬಾಯಿ ಇಟ್ಟು ರಕ್ತ ಹೀರಬಾರದು.
* ಹಾವು ಕಚ್ಚಿದ ಜಾಗವನ್ನು ಚಾಕುವಿನಿಂದ ಕುಯ್ದುಕೊಳ್ಳುವುದು ಒಳ್ಳೆಯದಲ್ಲ.
* ಹಾವು ಕಚ್ಚಿದ ಜಾಗದ ಮೇಲ್ಭಾಗವನ್ನು ದಾರದಿಂದ ಬಿಗಿಯಬೇಕು.
* ೧೫ ನಿಮಿಷಕ್ಕೊಮ್ಮೆ ಸಡಿಲಿಸಿ ಮತ್ತೆ ಬಿಗಿಯಬೇಕು.
* ಶರೀರದಲ್ಲಿ ಕಡಿಮೆ ವಿಷ ಸೇರಿದಲ್ಲಿ ಸಾವು ಸಂಭವಿಸಲ್ಲ.
* ಆದಷ್ಟು ಬೇಗ ಹಾವು ಕಡಿತಕ್ಕೆ ಒಳಗಾದವರನ್ನು ವೈದ್ಯರ ಬಳಿಗೆ ಕರೆದೊಯ್ಯಬೇಕು
* ಹಾವು ಕಚ್ಚಿದ ಗುರುತುಗಳ ಆಧಾರದ ಮೇಲೆ ಅದು ವಿಷ ಸರ್ಪನಾ? ಅಲ್ಲವಾ ಎಂಬುದನ್ನು ವೈದ್ಯರು ನಿರ್ಧಾರ ಮಾಡಿ, ಚಿಕಿತ್ಸೆ ನೀಡುತ್ತಾರೆ.