ಬೆಂಗಳೂರು: ಪ್ರಧಾನಿ (PM) ನರೇಂದ್ರ ಮೋದಿಯವರು (narendra modi) ಶುಕ್ರವಾರ ಬೆಂಗಳೂರಿಗೆ (bengaluru) ಆಗಮಿಸಲಿರುವ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಬದಲಾವಣೆ ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಜನವರಿ 19ರಂದು ದೇವನಹಳ್ಳಿಯ (devanahalli) ಏರೋಸ್ಪೇಸ್ ಪಾರ್ಕ್ನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (BIETC) ಕ್ಯಾಂಪಸ್ ಅನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bangalore Kempegowda International Airport) ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಹೆಣ್ಣೂರು- ಬಾಗಲೂರು ರಸ್ತೆ (ಹೊಸ ವಿಮಾನ ನಿಲ್ದಾಣ ರಸ್ತೆ) ಮತ್ತು ಕೆಐಎಗೆ ಹೋಗುವ ಇತರ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಗೊಲ್ಲಹಳ್ಳಿ ಗೇಟ್ ನಿಂದ ಹುನಚೂರುವರೆಗೆ, ಏರ್ ಲೈನ್ಸ್ ಡಾಬಾದಿಂದ ಬೂದಿಗೆರೆಯವರೆಗೆ, ಹೆಣ್ಣೂರು-ಬಗಲೂರು ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣ ರಸ್ತೆಯವರೆಗೆ, ಚಿಕ್ಕಜಾಲ ಕೋಟೆ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದವರೆಗೆ, ಬಗಲೂರಿನಿಂದ ವಿಮಾನ ನಿಲ್ದಾಣದವರೆಗೆ ಸಂಚಾರವನ್ನು ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.
ವೈಟ್ ಫೀಲ್ಡ್, ಕೆ.ಆರ್. ಪುರಂನಿಂದ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗೊಲ್ಲಹಳ್ಳಿ ಗೇಟ್ ಮಾರ್ಗವಾಗಿ ಸಂಚರಿಸುವವರು ಗೊಲ್ಲಹಳ್ಳಿ ಗೇಟ್-ಬಲದಿರುವು-ಹೊನ್ನಹಳ್ಳಿ ಗೇಟ್-ಬೆಟ್ಟಕೋಟೆ-ಎಲ್ಲೈನ್ ಡಾಬಾ-ಎಡತಿರುವು-ದೇವನಹಳ್ಳಿ ಬಸ್ ನಿಲ್ದಾಣ-ಎಡ ತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ-ದೇವನಹಳ್ಳಿ ಟೋಲ್-ಎಡ ತಿರುವು-ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪಬಹುದು.
ರಾಷ್ಟ್ರೀಯ ಹೆದ್ದಾರಿ-648 ಏರ್ಲೈನ್ ಡಾಬಾ ಜಂಕ್ಷನ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಡೆಗೆ ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ ಸಂಚರಿಸುವ ವಾಹನ ಏರ್ಲೈನ್ಸ್ ಡಾಬಾ-ದೇವನಹಳ್ಳಿ ಬಸ್ ನಿಲ್ದಾಣ-ಎಡತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ- ದೇವನಹಳ್ಳಿ ಟೋಲ್-ಎಡ ತಿರುವು ಪಡೆದುಕೊಳ್ಳಬೇಕು.
ಹೆಣ್ಣೂರು-ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ಸಂಚರಿಸುವವರು ಬಾಗಲೂರು ಗುಂಡಪ್ಪ ಸರ್ಕಲ್-ಎಡ ತಿರುವು-ರೇವಾ ಕಾಲೇಜು ಜಂಕ್ಷನ್-ಬಾಗಲೂರು ಕ್ರಾಸ್-ಬಲ ತಿರುವು- ಚಿಕ್ಕ ಚಾಲ-ಸಾದಹಳ್ಳಿ ಟೋಲ್ -ಏರ್ ಪೋರ್ಟ ಪ್ರೈ ಓವರ್ ಮೂಲಕ ಪ್ರವೇಶ ಪಡೆಯಬಹುದು.
ಚಿಕ್ಕಜಾಲ ಕೋಟೆ ಕ್ರಾಸ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ಸಂಚರಿಸುವವರು ಚಿಕ್ಕಚಾಲ-ಸಾದಹಳ್ಳಿ ಟೋಲ್ – ಏರ್ ಪೋರ್ಟ ಪ್ರೈ ಓವರ್ ಮೂಲಕ ಪ್ರವೇಶ ಪಡೆಯಬಹುದು.
ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳನ್ನು ಸರ್ಕಲ್ ಮಾರ್ಗವಾಗಿ ಸಂಚರಿಸುವವರು ಬಾಗಲೂರು ಕಾಲೋನಿ ಬಲ ತಿರುವು – ರಜಾಕ್ ಪಾಳ್ಯ – ಎಂ.ವಿ.ಐ.ಟಿ ಕಾಲೇಜು – ಚಿಕ್ಕಚಾಲ ಬಲ ತಿರುವು – ಬಿಬಿ ರಸ್ತೆ – ಸಾದಹಳ್ಳಿ ಟೋಲ್- ಏರ್ ಪೋರ್ಟ್ ಪ್ರೈ ಓವರ್ ಮೂಲಕ ಪ್ರವೇಶ ಪಡೆಯಬಹುದು.
"Traffic Advisory"
"ಸಂಚಾರ ಸಲಹೆ" pic.twitter.com/HLW5Z246b8— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 17, 2024