ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಒಟ್ಟು 92 ಸಂಸದರನ್ನು ಅಮಾನತು ಮಾಡಿದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಘಟಕ ಪ್ರಧಾನಿ ನರೇಂದ್ರ ಮೋದಿಯವರನ್ನು ಉತ್ತರ ಕುಮಾರನಿಗೆ ಹೋಲಿಸಿ ಸರಣಿ ಟ್ವೀಟ್ ಮಾಡಿದೆ.
ಸಂಸತ್ತಿನಲ್ಲಾಗಿರುವ ಭದ್ರತಾ ಲೋಪದ ಬಗ್ಗೆ ಸಂಸತ್ತಿನಲ್ಲಿ ಉತ್ತರಿಸಲಾಗದೇ ಹೇಡಿತನ ಪ್ರದರ್ಶಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಧಾನಿ @narendramodi ಅವರು ಉತ್ತರದಾತ್ವದಿಂದ ತಪ್ಪಿಸಿಕೊಳ್ಳುವ ಉತ್ತರಕುಮಾರ! ಸಂಸತ್ತಿನಲ್ಲಿ ಭದ್ರತಾ ವೈಫಲ್ಯವಾಗಿರುವ ಸಂಗತಿಯನ್ನು ಸಂಸತ್ತಿನಲ್ಲಿ ಚರ್ಚಿಸಲು ಮೋದಿ ಹಿಂದೇಟು ಹಾಕುತ್ತಿರುವುದೇಕೆ? ತಮ್ಮ ಬಂಡವಾಳ ಬಯಲಾಗುವ ಭಯವೇ? ಪುಲ್ವಾಮ ದಾಳಿಯ ತನಿಖೆ ಮುಗಿಯಲೇ ಇಲ್ಲ, ಭದ್ರತಾ ವೈಫಲ್ಯದ ಲೋಪದ ಸಂಗತಿ ಹೊರಬರಲಿಲ್ಲ ಏಕೆ ಮೋದಿಯವರೇ? ಯೋಧರ ಹತ್ಯೆಯನ್ನು ತನಿಖೆ ಮಾಡುವುದಕ್ಕಿಂತ ಸಾರ್ವಜನಿಕ ಚರ್ಚೆಯ ಮೂಲಕ ಚುನಾವಣೆಗೆ ಬಳಸಿಕೊಂಡಿದ್ದೀರಿ ಅಲ್ಲವೇ? ಸಂಸತ್ ದಾಳಿ ಪ್ರಕರಣದಲ್ಲಿ ನಿಮ್ಮದೇ ಪಕ್ಷದ ಸಂಸದ
@mepratap ಅವರನ್ನು ತನಿಖೆಗೆ ಒಳಪಡಿಸದಿರುವಾಗ ನಿಮ್ಮ ತನಿಖೆಗೆ ವಿಶ್ವಾಸಾರ್ಹ ಎಂದು ನಂಬಲು ಸಾಧ್ಯವೇ?
ಬಿಜೆಪಿ ಉತ್ತರಿಸಲಾಗದ ಉತ್ತರಕುಮಾರರ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಸಂಸತ್ ದಾಳಿ ಹಾಗೂ ಭದ್ರತಾ ಲೋಪದ ಕುರಿತು ಚರ್ಚೆಗೆ ಆಗ್ರಹಿಸಿದ 92 ಸಂಸದರನ್ನು ಕಲಾಪದಿಂದ ಅಮಾನತು ಮಾಡಿ ಪ್ರಜಾಪ್ರಭುತ್ವಕ್ಕೆ ಐತಿಹಾಸಿಕ ಅಪಚಾರ ಮಾಡಲಾಗಿದೆ. ಒಬ್ಬ ಮತಿಗೇಡಿ.
@mepratap ಅವರನ್ನು ರಕ್ಷಿಸಲು ಹಾಗೂ ಸರ್ಕಾರದ ಲೋಪವನ್ನು ಮುಚ್ಚಿಹಾಕಲು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದು ಅತ್ಯಂತ ಹೇಯ ಕೃತ್ಯ.ಉತ್ತರ ಕುಮಾರ @narendramodi ಅವರಿಗೆ
◆ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಲು ಭಯ. ◆ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಲು ಭಯ. ◆ರೈತರೊಂದಿಗೆ ಸಂವಾದ ನಡೆಸುವುದಕ್ಕೂ ಭಯ. ◆ನಿರುದ್ಯೋಗಿ ಯುವಕರ ಪ್ರಶ್ನೆಗಳಿಗೆ ಉತ್ತರಿಸಲು ಭಯ. ◆ವಿದ್ಯಾರ್ಥಿಗಳೊಂದಿಗೆ ಮಾತನಾಡುವುದಕ್ಕೂ ಭಯ. ◆ಈ ದೇಶದ ನಾಗರಿಕರ ಸಮಸ್ಯೆಗಳನ್ನು ಆಲಿಸುವುದಕ್ಕೆ ಭಯ. ಸರ್ವಾಧಿಕಾರಿಯ ಮೂಲ ಗುಣ “ಹೇಡಿತನ” ಎಂಬ ಮಾತನ್ನು ಮೋದಿ ನಿರೂಪಿಸುತ್ತಿದ್ದಾರೆ.
ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ADVERTISEMENT
ADVERTISEMENT