ADVERTISEMENT
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬರ್ಗಳ ಸಂಖ್ಯೆ ಇವತ್ತು 2 ಕೋಟಿ ದಾಟಿದೆ. ಈ ಮೂಲಕ 2 ಕೋಟಿ ಸಬ್ಸ್ಕ್ರಿಷನ್ ಉಳ್ಳ ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ವಿಶ್ವದ ಮೊದಲ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ ಅರಂಭವಾಗಿದ್ದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2007ರ ಅಕ್ಟೋಬರ್ 26ರಂದು. ಇದುವರೆಗೆ ಈ ಚಾನೆಲ್ನಲ್ಲಿ 23,407 ವೀಡಿಯೋಗಳನ್ನು ಪ್ರಕಟಿಸಲಾಗಿದೆ. ಕಳೆದ 16 ವರ್ಷ ಎರಡು ತಿಂಗಳಲ್ಲಿ ಆಗಿರುವ ಒಟ್ಟು ವೀಕ್ಷಣೆ 453 ಕೋಟಿ.
2014ರ ಲೋಕಸಭಾ ಚುನಾವಣೆಗೂ ಮೊದಲು 2014ರ ಏಪ್ರಿಲ್ 16ರಂದು ಅಪ್ಲೋಡ್ ಮಾಡಲಾದ ಇಂಡಿಯಾ ಟಿವಿ ಮುಖ್ಯಸ್ಥ ರಜತ್ ಶರ್ಮಾ ಅವರ ಜೊತೆಗಿನ ಮೋದಿ ಅವರ ಅಪ್ ಕೀ ಅದಾಲತ್ ಶೋ ಅತ್ಯಧಿಕ 7.5 ಕೋಟಿ ವೀಕ್ಷಣೆಯನ್ನು ಕಂಡಿದ್ದು, ಮೋದಿ ಯೂಟ್ಯೂಬ್ ಚಾನೆಲ್ನ ಅತ್ಯಂತ ಜನಪ್ರಿಯ ವೀಡಿಯೋ.
ಲೈವ್ ವೀಡಿಯೋಗಳ ಪೈಕಿ ನಟ ಅಕ್ಷಯ್ ಕುಮಾರ್ ಅವರಿಗೆ 2019ರ ಏಪ್ರಿಲ್ 24ರಂದು ನೀಡಿದ್ದ ಸಂದರ್ಶನದ ನೇರ ಪ್ರಸಾರ 7.5 ಕೋಟಿ ವೀಕ್ಷಣೆಯನ್ನು ಕಂಡು ಮೋದಿ ಯೂಟ್ಯೂಬ್ ಚಾನೆಲ್ಗಳಲ್ಲಿ ಲೈವ್ ವೀಡಿಯೋಗಳಲ್ಲೇ ಅತ್ಯಂತ ಜನಪ್ರಿಯವಾಗಿದೆ.
ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೋ ಅವರ ಯೂಟ್ಯೂಬ್ ಚಾನೆಲ್ 64 ಲಕ್ಷ ಸಬ್ಸ್ಕ್ರಿಪ್ಸನ್ನೊಂದಿಗೆ ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆಂಕ್ಸಿ ಅವರ ಯೂಟ್ಯೂಬ್ ಚಾನೆಲ್ 22 ಕೋಟಿ ವೀಕ್ಷಣೆಯೊಂದಿಗೆ ಮೋದಿ ಬಳಿಕ 2ನೇ ಸ್ಥಾನದಲ್ಲಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಯೂಟ್ಯೂಬ್ ಚಾನೆಲ್ನ ಸಬ್ಸ್ಕ್ರೈಬರ್ಗಳ ಸಂಖ್ಯೆ 7.89 ಲಕ್ಷ.
ADVERTISEMENT