ಅಲ್ಪಮತದ ಬಿಜೆಪಿ ಸಂಸದೀಯ ಪಕ್ಷದ ನಾಯಕರೂ ಆಗಿರುವ ನರೇಂದ್ರ ಮೋದಿ ಅವರು ನಾಳೆ ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ನಾಳೆ ಸಂಜೆ 7 ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರಿಗೆ ಮತ್ತು ಅವರ ಸಂಪುಟ ಸೇರಲಿರುವ ಸಂಸದರಿಗೆ ಸಚಿವರಾಗಿ ಪ್ರಮಾಣವಚನ ಬೋಧಿಸಲಿದ್ದಾರೆ.
ನಾಳೆ ಈ ಕಾರ್ಯಕ್ರಮಕ್ಕೆ ನೆರೆಹೊರೆಯ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ. ನಾಳೆ ಮೋದಿ ಅವರ ಪ್ರಮಾಣವಚನದಲ್ಲಿ ಭಾಗವಹಿಸಲಿರುವ ವಿದೇಶಿ ಗಣ್ಯರ ಪಟ್ಟಿ ಇಲ್ಲಿದೆ.
1. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ
2. ಮಾಲ್ಡೀವ್ಸ್ ಅಧ್ಯಕ್ಷ ಡಾ ಮೊಹಮ್ಮದ್ ಮೈಝು
3. ಸಿಚಿಲಿಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್
4. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ
5. ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗನೌತ್
6. ನೇಪಾಳ ಪ್ರಧಾನಿ ಪುಷ್ಪ ಕುಮಾರ್ ದಹಲ್ ಪ್ರಚಂಡ
7. ಭೂತಾನ್ ಪ್ರಧಾನಿ ತೆಸ್ರಿಂಗ್ ತಾಬ್ಗೇ
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಸಿಚಿಲಿಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್ ಅವರು ಇವತ್ತೇ ಭಾರತಕ್ಕೆ ಆಗಮಿಸುತ್ತಿದ್ದು ಉಳಿದ ಗಣ್ಯರು ನಾಳೆ ಆಗಮಿಸಲಿದ್ದಾರೆ.
ADVERTISEMENT
ADVERTISEMENT