ಕಂಠಪೂರ್ತಿ ಕುಡಿದು ಶಾಸಕರಿಗೆ ಮನವಿ ಪತ್ರ ಕೊಡಲು ಬಂದಿದ್ದ ವಸತಿ ಶಾಲೆಯ ಪ್ರಾಂಶುಪಾಲ ಅಮಾನತ್ತಾಗಿದ್ದಾನೆ.
N.R ಪುರ ತಾಲೂಕಿನ ಸಂಸೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕನಾಯ್ಕ ಅಮಾನತಾಗಿದ್ದಾನೆ. ಈತ ವಸತಿ ಶಾಲೆಯ ಸಮಸ್ಯೆ ಕುರಿತು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡಗೆ ಮನವಿ ಪತ್ರ ಕೊಡಲು ಬಂದಿದ್ದ.
ಪಾನಮತ್ತ ಪ್ರಾಂಶುಪಾಲನನ್ನು ನೋಡಿದ ಶಾಸಕರು ತಕ್ಷಣವೇ ಮದ್ಯಪಾನ ಪರೀಕ್ಷೆ ಮಾಡಿಸಿದರು.
ಈ ವೇಳೆ ಮದ್ಯಪಾನ ಸೇವನೆ ಖಚಿತ ಆದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪ್ರಾಂಶುಪಾಲರನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ADVERTISEMENT
ADVERTISEMENT