ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಇನ್ನು 8 ತಿಂಗಳು ಬಾಕಿ ಇರುವಂತೆ ಕಾಂಗ್ರೆಸ್ (Congress) ಮಹತ್ವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಕರ್ನಾಟಕದ ಚುನಾವಣಾ ಉಸ್ತುವಾರಿ ಆಗಿ ಸ್ವತಃ ಪ್ರಿಯಾಂಕ ಗಾಂಧಿಯವರನ್ನೇ (Priyanka Gandhi) ಎಐಸಿಸಿ (AICC) ನೇಮಕ ಮಾಡುವ ನಿರೀಕ್ಷೆ ಇದೆ.
ಕರ್ನಾಟಕದಿಂದ ರಾಜ್ಯಸಭಾ ಚುನಾವಣೆ ನಡೆದ ವೇಳೆ ಕರ್ನಾಟಕದಿಂದ ಸ್ಪರ್ಧೆ ಮಾಡುವಂತೆ ಪ್ರಿಯಾಂಕ ಅವರಿಗೆ ಕರ್ನಾಟಕದ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು.
ಆದರೆ ಆ ಮನವಿಯನ್ನು ಪ್ರಿಯಾಂಕ ನಿರಾಕರಿಸಿದ್ದರು.
ಕರ್ನಾಟಕದ ಜೊತೆಗೆ ತೆಲಂಗಾಣದಲ್ಲಿ (Telangana) ನಡೆಯಲಿರುವ ವಿಧಾನಸಭಾ ಚುನಾವಣೆಗೂ ಪ್ರಿಯಾಂಕ ಉಸ್ತುವಾರಿ ಆಗುವ ಸಾಧ್ಯತೆ ಇದೆ.
2024ರಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ADVERTISEMENT