ಶಿವಮೊಗ್ಗ ನಗರದಲ್ಲಿ (Shivamogga City) ಮತ್ತೆ ನಿಷೇಧಾಜ್ಞೆ ಜಾರಿ ಆಗಿದೆ.
ಶಿವಮೊಗ್ಗ ನಗರದ ಅಮೀರ್ ಅಹಮದ್ ವೃತ್ತದಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ಅವರ ಫ್ಲೆಕ್ಸ್ ಇಡುವ ಬಗ್ಗೆ ಗಲಾಟೆ ಆಗಿದೆ.
ಆ ಫ್ಲೆಕ್ಸ್ನ್ನು ತೆಗೆದು ಟಿಪ್ಪು ಸುಲ್ತಾನ್ (Tippu Sultan) ಪ್ಲೆಕ್ಸ್ನ್ನು ಇಡಲು ಇನ್ನೊಂದು ಗುಂಪು ಯತ್ನಿಸಿತ್ತು.
ಸಾವರ್ಕರ್ ಫ್ಲೆಕ್ಸ್ನ್ನು ಪೊಲೀಸರು ತೆರವುಗೊಳಿಸಿದರೆ, ಟಿಪ್ಪು ಸುಲ್ತಾನ್ ಫ್ಲೆಕ್ಸ್ನ್ನು ಇಡಲು ಪೊಲೀಸರು ಅನುಮತಿ ನೀಡಲಿಲ್ಲ.
ಈ ವೇಳೆ ಹಿಂದೂ ಸಂಘಟನೆಯವರು ಪ್ರತಿಭಟನೆಗೆ ಮುಂದಾದರೆ ಮತ್ತೊಂದು ಗುಂಪಿನವರೂ ಪ್ರತಿಭಟನೆಗೆ ಯತ್ನಿಸಿದರು.
ಈ ವೇಳೆ ಎರಡೂ ಕೋಮಿನವರನ್ನು ಪೊಲೀಸರು ತಡೆದರು.
ಮುನ್ನೆಚ್ಚರಿಕಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿದ್ದಾರೆ.
ADVERTISEMENT
ADVERTISEMENT