ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದ ಕೇವಲ ಎರಡೇ ತಿಂಗಳಲ್ಲಿ ಪಂಜಾಬ್ ಆಮ್ ಆದ್ಮಿ ಪಾರ್ಟಿ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಮೊದಲ ವಿಕೆಟ್ ಪತನ ಆಗಿದೆ.
ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್ ಸಂಪುಟದಿAದ ವಜಾ ಮಾಡಿದ್ದಾರೆ.
ಟೆಂಡರ್ಗಾಗಿ ಶೇಕಡಾ 1ರಷ್ಟು ಕಮಿಷನ್ ಕೇಳಿದ ಆರೋಪ ವಿಜಯ್ ಸಿಂಗ್ಲಾ ಮೇಲಿದೆ.
`ಶೇಕಡಾ 1ರಷ್ಟು ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿರುವ ಸಿಎಂ ಮನ್, ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.