ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್ ಅವರು ಇಂದು ಗುರುವಾರ ವೈದ್ಯೆ ಡಾ.ಗುರ್ ಪ್ರೀತ್ ಕೌರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
48 ವರ್ಷದ ಭಗವಂತ್ ಸಿಂಗ್ ಮನ್ ಅವರು 28 ವರ್ಷದ ಗುರ್ ಪ್ರೀತ್ ಕೌರ್ ಅವರನ್ನು 2 ನೇ ವಿವಾಹವಾಗಿದ್ದಾರೆ. ಈ ವಿವಾಹದಲ್ಲಿ ಕುಟುಂಬ ಮತ್ತು ಆತ್ಮೀಯ ಗೆಳೆಯರು ಮಾತ್ರ ಭಾಗಿಯಾಗಲಿದ್ದರು.. ಎಎಪಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮದುವೆಯಲ್ಲಿ ಭಾಗಿಯಾಗಿದ್ದರು.
ಸಿಎಂ ಭಗವಂತ್ ಸಿಂಗ್ ಮನ್ ಅವರು ತಮ್ಮ ಈ ಹಿಂದಿನ ಪತ್ನಿ ಗುರು ಪ್ರೀತ್ ಕೌರ್ ಅವರಿಗೆ 6 ವರ್ಷಗಳ ಹಿಂದೆ ವಿಚ್ಚೇದನ ನೀಡಿದ್ದರು. ಈಗ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ.
ಕಳೆದ ಪಂಜಾಬ್ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ಭರ್ಜರಿ ಜಯಗಳಿಸಿತ್ತು. ಮೊದಲೇ ಘೋಷಿಸಿದಂತೆ ಭಗವಂತ್ ಸಿಂಗ್ ಮನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈಗ ಭಗವಂತ್ ಸಿಂಗ್ ಮನ್ ರನ್ನು ಕೈಹಿಡಿದಿರುವ ವಧು ಗುರ್ ಪ್ರೀತ್ ಕೌರ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು ಎನ್ನಲಾಗುತ್ತಿದೆ.