ಹೊಸ ಶೈಕ್ಷಣಿಕ ವರ್ಷದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆಘಾತ ನೀಡುವುದು ನಿಚ್ಚಳವಾಗಿದೆ.
ಹೊಸ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳ ಶುಲ್ಕ ಶೇಕಡಾ 15ರಷ್ಟು ಏರಿಸಲು ಖಾಸಗಿ ಶಾಲೆಗಳ ಸಂಘಟನೆ ನಿರ್ಧರಿಸಿವೆ.
ಪ್ರವೇಶ ಶುಲ್ಕದಲ್ಲಿ ಶೇಕಡಾ 5ರಿಂದ ಶೇಕಡಾ 15ರಷ್ಟು ಅಂದರೆ ಬರೋಬ್ಬರಿ ಶೇಕಡಾ 10ರಷ್ಟು ಹೆಚ್ಚಳ ಆಗಲಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶುಲ್ಕ ನಿರ್ಧರಿಸುವ ಅಥವಾ ನಿಯಂತ್ರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಇದೇ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು.