ಚಾಲೆಂಜಿಗ್ ಸ್ಟಾರ್, ಡಿ ಬಾಸ್ ದರ್ಶನ್ ಅವರ ಹೊಸ ಸಿನಿಮಾ ಡಿ56 ಚಿತ್ರದಲ್ಲಿ ದರ್ಶನ್ ಅವರ ಜೊತೆಗೆ ಮಾಲಾಶ್ರೀ ಮತ್ತು ರಾಮ್ ಅವರ ಪುತ್ರಿ ರಾಧನಾ ರಾಮ್ ಅವರು ನಾಯಕಿಯಾಗಿದ್ದಾರೆ.
ತಮಗೆ ಸಿಕ್ಕ ಮೊದಲ ಅವಕಾಶ ಬಗ್ಗೆ ರಾಧಾನಾರಾಮ್ ಅವರು ಭಾವುಕರಾಗಿದ್ದಾರೆ.
ನನ್ನ ಮೊದಲ ಚಿತ್ರ. ನನ್ನ ಭಾವನೆಯನ್ನು ವ್ಯಕ್ತಪಡಿಸಲು ಸಾಕಷ್ಟು ಪದಗಳಿಲ್ಲ. ಈ ಅವಕಾಶಕ್ಕಾಗಿ ನಾನು ಅಭಾರಿಯಾಗಿದ್ದೇನೆ ಮತ್ತು ಈ ಹೊಸ ಪ್ರಯಾಣವನ್ನು ಪ್ರಾರಂಭಿಸಲು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸದ ಆರ್ಶೀವಾದ ಸದಾ ನನ್ನ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ.
ಎಂದು ರಾಧಾನ ರಾಮ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
🙏🏻🙏🏻🙏🏻🎉🎉❤️ @RocklineEnt @dasadarshan @TharunSudhir #D56 pic.twitter.com/MN3nLqpXOx
— Aradhanaa (@Aradhanaa_r) August 5, 2022
ತಮ್ಮ ಮಗಳ ಸಿನಿಮಾ ರಂಗ ಪ್ರವೇಶದಿಂದ ಮಾಲಾಶ್ರೀ ಅವರೂ ತುಂಬಾ ಖುಷಿಯಾಗಿದ್ದಾರೆ.
ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ… ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ 🙏🙏 pic.twitter.com/7lf3V33AyN
— Malashree Ramu (@RamuMalashree) August 5, 2022
ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ! ✨
ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ!
ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು@dasadarshan @TharunSudhir#D56WelcomesRadhanaRam pic.twitter.com/S5cZp3IC7r
— RocklineEnt (@RocklineEnt) August 5, 2022