ರಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಹೊಸ ಸ್ಫೋಟಕ ದಾಖಲೆ ಮತ್ತು ವರದಿ ಬಹಿರಂಗವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆಯಿಂದ ರಫೆಲ್ ಯುದ್ಧ ವಿಮಾನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆದುಕೊಂಡ ಉದ್ಯಮಿ ಅನಿಲ್ ಅಂಬಾನಿಗೆ ಫ್ರಾನ್ಸ್ ಸರ್ಕಾರ ಭಾರೀ ಪ್ರಮಾಣದ ತೆರಿಗೆ ವಿನಾಯಿತಿ ನೀಡಲಾಗಿದೆ ಎಂಬ ಸ್ಫೋಟಕ ವರದಿಯನ್ನು ಪ್ರಕಟಿಸಿವೆ.
ಈ ತನಿಖಾ ವರದಿಯನ್ನು ಮೊದಲಿಗೆ ಫ್ರಾನ್ಸ್ ಪ್ರಮುಖ ದಿನಪತ್ರಿಕೆ ಲೆ ಮೊಂಡೆಯಲ್ಲಿ ವರದಿಯಾಗಿತ್ತು. ಫ್ರಾನ್ಸ್ನ ವೆಬ್ಸೈಟ್ ಮೀಡಿಯಾಪಾರ್ಟ್ ಪ್ರಕಾರ ಅನಿಲ್ ಅಂಬಾನಿ ಅವರ ಒಡೆತನದ ಫ್ಲ್ಯಾಗ್ ಅಟ್ಲಾಂಟಿಕ್ ಫ್ರಾನ್ಸ್ ಎಂಬ ಕಂಪನಿಗೆ ಬರೋಬ್ಬರೀ 144 ದಶ ಲಕ್ಷ ಯುರೋ ಮೊತ್ತದ ತೆರಿಗೆ ಕಡಿತ ಮಾಡಲಾಗಿದೆ ಎಂದು ಮೀಡಿಯಾ ಪಾರ್ಟ್ ವರದಿ ಮಾಡಿದೆ.
ತೆರಿಗೆ ಪಾವತಿ ನೀಡಲಾಗಿರುವ ನೋಟಿಸ್ ವಾಪಸ್ ಪಡೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸುವಂತೆ ಅನಿಲ್ ಅಂಬಾನಿ ಅವರು ಆಗ ಫ್ರಾನ್ಸ್ನಲ್ಲಿ ಭಾರತದ ರಾಯಭಾರಿಯಾಗಿದ್ದ ಅರುಣ್ ಸಿಂಗ್ ಮತ್ತು ಆಗ ಆರ್ಥಿಕ ಸಚಿವರಾಗಿದ್ದ ಈಗ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯಲ್ ಮ್ಯಾಕ್ರನ್ಗೆ ಮತ್ತು ಆಗ ಹಣಕಾಸು ಸಚಿವರಾಗಿದ್ದ ಮೈಕಲ್ ಸ್ಯಾಪಿನ್ಗೆ ಪತ್ರ ಬರೆದಿದ್ದರು.
ಈ ಪತ್ರ ಬರೆದ ಬಳಿಕ ಅನಿಲ್ ಅಂಬಾನಿಗೆ ಫ್ರಾನ್ಸ್ ಸರ್ಕಾರ ತೆರಿಗೆ ವಿನಾಯಿತಿಯನ್ನು ನೀಡಿತ್ತು. 2008ರಿಂದ 2012ರವರೆಗೆ ತಮ್ಮ ಕಂಪನಿ ಮೂಲಕ ಫ್ರಾನ್ಸ್ನಲ್ಲಿ ಮಾಡಿದ್ದ ವಹಿವಾಟಿಗೆ ಅಂಬಾನಿ 151 ಮಿಲಿಯನ್ ಯುರೋದಷ್ಟು ಮೊತ್ತವನ್ನು ತೆರಿಗೆಯಾಗಿ ಪಾವತಿಸಬೇಕಿತ್ತು.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಫಾನ್ಸ್ಗೆ ಭೇಟಿ ನೀಡಿ ಹೊಸ ಒಪ್ಪಂದ ಮಾಡಿಕೊಳ್ಳುವ ವೇಳೆ ಅವರ ಜೊತೆಗೆ ಅನಿಲ್ ಅಂಬಾನಿ ಕೂಡಾ ಇದ್ದರು. ಪ್ರಧಾನಿ ಮೋದಿಯವರ ಈ ಭೇಟಿಯ ಬಳಿಕ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿಗೆ ಭಾರೀ ಮೊತ್ತದ ತೆರಿಗೆ ಕಡಿತವನ್ನು ಮಾಡಿತ್ತು.
ಈ ದಾಖಲೆಗಳು ಬಹಿರಂಗವಾಗುವುದರೊಂದಿಗೆ ಸರ್ಕಾರಿ ಸ್ವಾಮ್ಯದ ಹೆಚ್ಎಎಲ್ನ್ನು ಧಿಕ್ಕರಿಸಿ ಅನಿಲ್ ಅಂಬಾನಿ ಮಾಲೀಕತ್ವದ ಕಂಪನಿಯ ಜೊತೆಗೆ ರಫೆಲ್ ಯುದ್ಧ ವಿಮಾನ ಉತ್ಪಾದನೆಗೆ ಪ್ರಧಾನಿ ಮೋದಿ ಸರ್ಕಾರ ಮಾಡಿಕೊಂಡ ಒಪ್ಪಂದ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ADVERTISEMENT
ADVERTISEMENT