ಕಳೆದ ಎಂಟು ವರ್ಷಗಳಿಂದ ಭಾರತ ಸರ್ಕಾರ, ಜೈ ಜವಾನ್, ಜೈ ಕಿಸಾನ್ ಮೌಲ್ಯಗಳಿಗೆ ಅಪಮಾನ ಮಾಡುತ್ತಲೇ ಇದೆ.
ದೇಶದ ಕೃಷಿಕರಿಗೆ ಕಂಟಕವಾಗುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕಾಗುತ್ತದೆ ಎಂಬುದನ್ನು ನಾನು ಮೊದಲೇ ಹೇಳಿದ್ದೆ. ಕೊನೆಗೆ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಯಿತು. ಈಗಲೂ ಅದೇ ರೀತಿಯಲ್ಲಿ ದೇಶದ ಯುವಕರಲ್ಲಿ ಕ್ಷಮೆ ಕೇಳಿ ಮೋದಿ ಮಾಫಿವೀರರಾಗಬೇಕು. ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕು.
ಹೀಗಂತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆಯೂ ಟ್ವೀಟ್ ಮಾಡಿ,
ಅಗ್ನಿಪಥ್ – ನವಯುವಕರ ನಿರಾಕರಣೆ
ಕೃಷಿ ಕಾಯ್ದೆ – ಕೃಷಿಕರಿಂದ ನಿರಾಕರಣೆ
ನೋಟ್ ಬಂಧಿ – ಆರ್ಥಿಕ ತಜ್ಞರ ವಿರೋಧ
GST – ವ್ಯಾಪಾರಿಗಳ ವಿರೋಧ
ದೇಶದ ಜನತೆ ಏನು ಬೇಕಿದೆ ಎಂಬುದೇ ಪ್ರಧಾನಿಗೆ ಅರ್ಥ ಆಗುತ್ತಿಲ್ಲ. ಏಕೆಂದರೇ ಅವರಿಗೆ ಅವರ ಮಿತ್ರ ಮಾತು ಬಿಟ್ಟು ಬೇರೆಯವರ ಮಾತು ಕೇಳುತ್ತಿಲ್ಲ ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.