ADVERTISEMENT
2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟ ಬಿಜೆಪಿಯನ್ನು ಸೋಲಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಲಿದೆ ಎಂಬುದು ನನ್ನ ಅನಿಸಿಕೆ. ನನ್ನ ಪ್ರಕಾರ ಅದು ಜನರನ್ನು ಅಚ್ಚರಿಗೊಳಿಸಬಹುದು. ಲೆಕ್ಕಹಾಕಿ ಅಷ್ಟೇ, ಪ್ರತಿಪಕ್ಷಗಳ ಒಕ್ಕೂಟ ಬಿಜೆಪಿಯನ್ನು ಸೋಲಿಸಲಿದೆ
ಎಂದು ಅಮೆರಿಕ ರಾಜಧಾನಿ ವಾಷಿಂಗ್ಟನ್ನಲ್ಲಿ ನ್ಯಾಷನಲ್ ಪ್ರೆಸ್ ಕ್ಲಬ್ನಲ್ಲಿ ನಡೆದ ಸಂವಾದದಲ್ಲಿ ಹೇಳಿದ್ದಾರೆ.
ವಿಪಕ್ಷಗಳು ಒಗ್ಗಟ್ಟಾಗಿವೆ. ನಾವು ಎಲ್ಲ ವಿರೋಧ ಪಕ್ಷಗಳ ಜೊತೆಗೆ ಸಂವಾದ ನಡೆಸುತ್ತಿದ್ದೇವೆ. ಒಳ್ಳೆಯ ಬೆಳವಣಿಗೆ ಆಗುತ್ತಿದೆ ಎಂದು ನನಗೆ ಅನಿಸುತ್ತಿದೆ. ಇದು ಸಂಕೀರ್ಣ ಮಾತುಕತೆ ಕಾರಣ ಕೆಲವು ಕಡೆಗಳಲ್ಲಿ ಆ ಪಕ್ಷಗಳ ಜೊತೆಗೆಯೇ ಸ್ಪರ್ಧಿಸುತ್ತಿವೆ. ಹೀಗಾಗಿ ಸ್ವಲ್ಪ ಮಟ್ಟಿನ ಕೊಡುಕೊಳ್ಳುವಿಗೆ ಅಗತ್ಯವಿದೆ
ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆದರೆ ನನಗೆ ಮಹಾಮೈತ್ರಿಕೂಟ ಏರ್ಪಡಲಿದೆ ಎಂಬ ವಿಶ್ವಾಸವಿದೆ
ಎಂದು ರಾಹುಲ್ ಗಾಂಧಿ ಹೇಳಿದ್ದಾರೆ
ADVERTISEMENT