ADVERTISEMENT
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ವಿಪಕ್ಷಗಳ ಒಗ್ಗಟ್ಟಿನ ಸಭೆಯ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.
ಈ ಹಿಂದೆ ರಾಹುಲ್ ಗಾಂಧಿ ನನ್ನ ಮಾತು ಕೇಳಿರಲಿಲ್ಲ. ಅವರು ಈ ಹಿಂದೆ ಮದುವೆ ಆಗ್ಬೇಕಿತ್ತು. ಇನ್ನೂ ಸಮಯ ಮೀರಿಲ್ಲ.
ರಾಹುಲ್ ಗಾಂಧಿ ಮದುವೆ ಆಗ್ಬೇಕು. ನಮ್ಮ ಮಾತು ಕೇಳಿ. ನಿಮಗೆ ಮದುವೆ ಒಪ್ಪಿಸುವಂತೆ ನಿಮ್ಮ ತಾಯಿ ನಮಗೆ ಹೇಳಿದ್ದಾರೆ. ಗಡ್ಡ ಬೆಳೆಸಬೇಡಿ. ಮದುವೆ ಆಗಿ
ಎಂದು ಲಾಲೂ ಪ್ರಸಾದ್ ಯಾದವ್ ತಮ್ಮದೇ ಶೈಲಿಯಲ್ಲಿ ರಾಹುಲ್ ಅವರಿಗೆ ಹೇಳಿದರು.
ಲಾಲೂ ಅವರ ಮಾತಿಗೆ ರಾಹುಲ್ ಗಾಂಧಿ ನಗುತ್ತ ಸುಮ್ಮನಾದರು.
ADVERTISEMENT