ರಾಯಚೂರು ನಗರದಲ್ಲಿ ಕಲುಷಿತ ನೀರು ಕುಡಿದು 8 ಜನ ಸಾವನ್ನಪ್ಪಿರುವ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಲೋಕಾಯುಕ್ತ ಇಲಾಖೆ ಕೈಗೆತ್ತಿಕೊಂಡಿದೆ.
ರಾಚೂರಿನ ಸಮಾಜಿಕ ಕಾರ್ಯಕರ್ತ ಎಚ್ಎಂ ವೆಂಕಟೇಶ್ ಅವರು ಮಾಧ್ಯಮ ವರದಿಗಳನ್ನು ಲಗತ್ತಿಸಿ ಈ ದುರ್ಘಟನೆಗ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಲೋಕಾಯುಕ್ತಕ್ಕೆ ಮಿಂಚಂಚೆ(ಇ-ಮೇಲ್) ಮಾಡಿ ದೂರು ಲಗತ್ತಿಸಿದ್ದರು.
ಈ ದೂರನ್ನು ಪರಿಗಣಿಸಿರುವ ಲೋಕಾಯುಕ್ತ ನ್ಯಾಯಾಧೀಶ ಬಿ.ಎಸ್.ಪಾಟೀಲ್ ಅವರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವಿಭಾಗಕ್ಕೆ ತನಿಖೆ ನಡೆಸಲು ಸೂಚಿಸಿದೆ.
ರಾಯಚೂರು ನಗರದ ರಾಂಪುರ ಕೆರೆಯ ನೀರನ್ನು ಶುದ್ಧಿಗೊಳಿಸದೇ ಜನರಿಗೆ ವಿತರಣೆ ಮಾಡಲಾಗಿತ್ತು. ಈ ನೀರನ್ನು ಕುಡಿದು ರಾಯಚೂರು ನಗರದ ಹಲವು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ, 8 ಜನ ಚೇತರಿಸಿಕೊಳ್ಳದೇ ಅಸುನೀಗಿದ್ದಾರೆ.