ವಿಧವೆಯಾಗಿರುವ ಮಹಿಳೆಯೊಬ್ಬರು ತನ್ನ 3 ಜನ ಮಕ್ಕಳನ್ನು ದಿನಕೂಲಿ ಮಾಡಿ ಓದಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ನಿರ್ಮಾಣಕ್ಕಾಗಿ ಸೂರೊಂದು(ಮನೆ) ಬೇಕಾಗಿದೆ. ಈ ಬಗ್ಗೆ ಮಹಿಳೆ ಜನ ಹಾಗೂ ಶಾಸಕರಲ್ಲಿ ಮೊರೆಯಿಟ್ಟಿದ್ದು, ಒಂದು ಚಿಕ್ಕ ಮನೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೇರವು ಕೇಳಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮ ಪಂಚಾಯಿತಿಯ ಗುಂಟರಾಳ ಗ್ರಾಮದ ದುರುಗಮ್ಮ ಅವರೇ ನೆರವು ಕೇಳಿರುವ ಮಹಿಳೆ.
ದುರುಗಮ್ಮ ಅವರ ಪತಿ ಈಶ್ವರಪ್ಪ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ತೀರಿಹೋಗಿದ್ದಾರೆ. ವಿಧವೆಯಾಗಿರುವ ಇವರು ಸಂಸಾರದ ನೊಗ ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ದುರ್ಗಮ್ಮ ಅವರಿಗೆ 3 ಜನ ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು.
ಸುಮಾರು 15 ವರ್ಷದಿಂದ ಇವರು ಗುಡಿಸಲಿನಲ್ಲಿಯೇ ವಾಸಮಾಡಿಕೊಂಡಿದ್ದಾರೆ. ಇದೀಗ, ಗುಡಿಸಲಿಗೂ ಆಯಸ್ಸಾಗಿದೆ. ಮಳೆ ಬಂದರೆ ಆಕಾಶ, ಅಂಗಳ ಒಂದೆಯಾಗುತ್ತದೆ. ಮಳೆ ಬಂದಾಗ ಈ ಗುಡಿಸಲಿನಲ್ಲಿ ನಿಲ್ಲುವುದಕ್ಕೂ ಆಗುವುದಿಲ್ಲ. ಇಂತಹ ಗುಡಿಸಲಿನಲ್ಲಿ ವಾಸಿಸುತ್ತಿರುವ ಮಹಿಳೆ ತಮ್ಮ ಮೂರು ಜನ ಮಕ್ಕಳಿಗೂ ದಿನಗೂಲಿ ಮಾಡಿ ಉತ್ತಮ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಈ ಕುಟುಂಬಕ್ಕೆ ಯಾವುದೇ ಆಸ್ತಿಯೂ ಇಲ್ಲ.
ಒಬ್ಬ ಮಗಳು ಚೈಲ್ಡ್ ಫಂಡ್ ಸಂಸ್ಥೆ ಸಹಾಯದಿಂದ ಓದುತ್ತಿದ್ದಾಳೆ. ಈ ನಿಸ್ಸಹಾಯಕ ತಾಯಿಯ ಕೂಲಿ ಕೆಲಸದ ಹಣ ಕುಟುಂಬದ ಪ್ರತಿನಿತ್ಯದ ಊಟಕ್ಕೂ ಸಾಕಾಗಲ್ಲ. ಇಂತಹ ದುಸ್ಥಿತಿಯ ಕುಟುಂಬಕ್ಕೆ ದಾನಿಗಳು ನೆರವಿನ ಹಸ್ತ ಚಾಚಬೇಕಿದೆ.
ಒಂದು ಚಿಕ್ಕ ಸೂರು(ಮನೆ) ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತುರ್ತು ಸಹಾಯದ ಅಗತ್ಯವಿದೆ. ಶಾಸಕ ಶಿವನಗೌಡ ನಾಯಕರು ಈ ಕುಟುಂಬ ನೋವಿಗೆ ಸ್ಪಂದಿಸಬೇಕಿದೆ. ಸರ್ಕಾರದ ಯೋಜನೆಯಲ್ಲಾದರೂ ಮನೆ ನಿರ್ಮಿಸಿಕೊಡಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ.
ಕುಟುಂಬಕ್ಕೆ ಸ್ಪಂದಿಸಬೇಕೆನ್ನುವವರು ದುರುಗಮ್ಮ ಗಂಡ ಈಶ್ವರಪ್ಪ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದು ಅಥವಾ ಖುದ್ದಾಗಿ ಅವರನ್ನೇ ಭೇಟಿ ಮಾಡಬಹುದು.
ದುರ್ಗಮ್ಮ ಗಂಡ ಈಶ್ವರಪ್ಪ
ಬ್ಯಾಂಕ್ : ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್
ಬ್ಯಾಂಕ್ ಖಾತೆ ಸಂಖ್ಯೆ : 10740101120365
IFSC ಸಂಖ್ಯೆ : PKGB0010740
ದೂರವಾಣಿ ಸಂಖ್ಯೆ : 7975606994, 7022369078