ADVERTISEMENT
ಮುಂಗಾರು ಮಳೆ (Rain Alert) ಅಬ್ಬರ ಸೆಪ್ಟೆಂಬರ್ 9ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 9ರವರೆಗೂ ರಾಜ್ಯದ ಬಹುತೇಕ ಕಡೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇವತ್ತು ಎಲ್ಲೆಲ್ಲಿ ಧಾರಾಕಾರ ಮಳೆ:
ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ದಾವಣಗೆರೆ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು
ನಾಳೆ (ಸೆಪ್ಟೆಂಬರ್ 6):
ಬೆಂಗಳೂರು ನಗರ (Bengaluru), ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur), ಚಿತ್ರದುರ್ಗ (Chitradurga), ರಾಮನಗರ (Ramanagara), ದಾವಣಗೆರೆ (Davanagere), ಹಾಸನ (Hassan), ಶಿವಮೊಗ್ಗ, (Shivamogga) ಕೊಡಗು (Kodagu), ಚಿಕ್ಕಮಗಳೂರು (Chikkamagaluru) ಚಾಮರಾಜನಗರ (Chamarajanagara), ಮೈಸೂರು (Mysuru), ಬಳ್ಳಾರಿ (Bellary)ಯಲ್ಲಿ ಧಾರಾಕಾರ ಮಳೆ ಆಗಲಿದೆ.
ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಆಗಲಿದೆ.
ನಾಡಿದ್ದು (ಸೆಪ್ಟೆಂಬರ್ 7)
ಬೀದರ್, ಕಲ್ಬುರ್ಗಿ, ಯಾದಗಿರಿ, ಹಾವೇರಿ, ಧಾರವಾಡ, ಕೊಪ್ಪಳ, ಗದಗ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಮಾತ್ರ ಮಳೆ ಇರಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆ ಆಗಲಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಆಗಲಿದೆ.
ಆಚೆ ನಾಡಿದ್ದು:(ಸೆಪ್ಟೆಂಬರ್ 8 )
ಮೂರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಉತ್ತರ ಕನ್ನಡ (Uttarkannada), ಮಲೆನಾಡು ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ.
ವಿಜಯಪುರ (Vijayapura), ಬಾಗಲಕೋಟೆ (Bagalkote), ಬೆಳಗಾವಿ (Belagavi) ಜಿಲ್ಲೆಗಳಲ್ಲೂ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಅದರ ಆಚೆ ನಾಡಿದ್ದು:(ಸೆಪ್ಟೆಂಬರ್ 9 )
ಮೂರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ.
ಗದಗ (Gadag), ಕೊಪ್ಪಳ (Koppal), ರಾಯಚೂರು (Raichuru), ಯಾದಗಿರಿ (Yadgir) ಜಿಲ್ಲೆಗಳಲ್ಲೂ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ADVERTISEMENT