ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಬ್ಬರಕ್ಕೆ ಐದನೇ ಸಾವು ಸಂಭವಿಸಿದೆ.
ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದಲ್ಲಿ ಭೂಕುಸಿತದಿಂದ 45 ವರ್ಷದ ಮಹಿಳೆ ಝರೀನಾ ಮೃತಪಟ್ಟಿದ್ದಾರೆ. 20 ವರ್ಷದ ಯುವತಿ ಗಾಯಗೊಂಡಿದ್ದಾರೆ.
ಮನೆ ಹಿಂಭಾಗದ ಗುಡ್ಡ ಕುಸಿದ ಕಾರಣ ದುರಂತ ಸಂಭವಿಸಿದೆ.
ಮಳೆಯಬ್ಬರದ ಹಿನ್ನೆಲೆಯಲ್ಲಿ ಇವತ್ತೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ADVERTISEMENT
ADVERTISEMENT