ರೈಲಿನಲ್ಲಿ (Rail Passengers) ಪ್ರಯಾಣಿಸುವವರು ಒಂದು ವೇಳೆ ಆನ್ಲೈನ್ (Online Booking) ಮೂಲಕ ಟಿಕೆಟ್ ಖರೀದಿಸಿದರೆ ಅವರಿಗೆ ವಿಮೆ (Insurance) ಸೌಲಭ್ಯ ಲಭ್ಯವಿದೆ.
ಅಂದಹಾಗೆ ಈ ವಿಮೆಗೆ ಟಿಕೆಟ್ ಬುಕ್ಕಿಂಗ್ (Ticket Booking) ವೇಳೆ ಪ್ರತಿಯೊಬ್ಬ ಪ್ರಯಾಣಿಕರು ಪಾವತಿಸಬೇಕಾದ ಮೊತ್ತ ಕೇವಲ 35 ಪೈಸೆ.
ಆದರೆ ವಿಮೆ ಖರೀದಿ ಕಡ್ಡಾಯವಲ್ಲ, ಅದು ಪ್ರಯಾಣಿಕರ ಆಯ್ಕೆಗೆ ಬಿಟ್ಟಿದ್ದು. ಒಂದು ವೇಳೆ ಐಆರ್ಸಿಟಿಸಿ ಆ್ಯಪ್ನಲ್ಲಿ ಟಿಕೆಟ್ ಬುಕ್ಕಿಂಗ್ ವೇಳೆ ವಿಮೆ ಬೇಡ ಎಂದು ಪ್ರಯಾಣಿಕರು ನಿರ್ಧರಿಸಿದರೆ 35 ಪೈಸೆ ಪಾವತಿಸಬೇಕಿಲ್ಲ.
ಒಂದು ವೇಳೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಮುಗಿದ ಬಳಿಕ ಆ ವಿಮೆ ಬೇಕೆಂದು ತೀರ್ಮಾನಿಸಿದರೂ ಆ ಸೌಲಭ್ಯ ಪಡೆಯಲು ಅವಕಾಶವಿಲ್ಲ. ಅಂದಹಾಗೆ ಪ್ರತಿ ಪ್ರಯಾಣಕ್ಕೂ ಪ್ರತ್ಯೇಕವಾಗಿಯೇ 35 ಪೈಸೆ ಪಾವತಿಸಿ ವಿಮೆ ಸೌಲಭ್ಯ ಪಡೆಯಬೇಕಾಗುತ್ತದೆ.
ಎಸ್ಬಿಐ ಜನರಲ್ ಇನ್ಸೂರೆನ್ಸ್ (SBI General Insurance) ಮತ್ತು ಲಿಬರ್ಟಿ ಜನರಲ್ ಇನ್ಸೂರೆನ್ಸ್ (Liberty General Insurance) ಮೂಲಕ ಐಆರ್ಸಿಟಿಸಿ (IRCTC) ಈ ವಿಮೆಯನ್ನು ನಿರ್ವಹಿಸುತ್ತದೆ.
ಪ್ರತಿ ಬಾರಿ ಪ್ರಯಾಣದ ವೇಳೆ 35 ಪೈಸೆಯ ವಿಮೆ ಮಾಡಿಸಿಕೊಂಡಂತೆ ರೈಲು ಅಪಘಾತದ ಸಂದರ್ಭದಲ್ಲಿ ವಿಮಾ ಕಂಪನಿಗಳ ಅಂತಹ ಪ್ರಯಾಣಿಕರಿಗೆ ಅಥವಾ ಅವರ ಕುಟುಂಬಸ್ಥರಿಗೆ ಸಿಗುವ ಲಾಭ ಹೀಗಿದೆ:
ರೈಲು ದುರಂತದಲ್ಲಿ ಮೃತಪಟ್ಟರೆ: ಮೃತರ ಕುಟುಂಬಸ್ಥರಿಗೆ ವಿಮೆ ಮೊತ್ತದ ಭಾಗವಾಗಿ 10 ಲಕ್ಷ ರೂಪಾಯಿ ಪರಿಹಾರ
ರೈಲು ಅಪಘಾತದಿಂದ ಶಾಶ್ವತ ವಿಕಲಚೇತನರಾದರೆ: ಆಗ ಆ ಗಾಯಾಳುವಿಗೆ 10 ಲಕ್ಷ ರೂಪಾಯಿ ವಿಮಾ ಪರಿಹಾರ
ರೈಲು ಅಪಘಾತದಿಂದ ಭಾಗಶಃ ವಿಕಲಚೇತನರಾದರೆ: ಆಗ ಆ ಗಾಯಾಳುವಿಗೆ 10 ಲಕ್ಷ ರೂಪಾಯಿ ಪರಿಹಾರ
ರೈಲು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ: ಆ ಪ್ರಯಾಣಿಕರ 2 ಲಕ್ಷ ರೂಪಾಯಿ ಮೊತ್ತದವರೆಗಿನ ಆಸ್ಪತ್ರೆ ವೆಚ್ಚ ಪಾವತಿ.
ಮೃತದೇಹ ರವಾನೆಗೆ: 10 ಸಾವಿರ ರೂಪಾಯಿ
ಜೂನ್ 2ರಂದು ಒಡಿಶಾದಲ್ಲಿ ಅಪಘಾತಕ್ಕೀಡಾಗಿದ್ದ ಎರಡು ಎಕ್ಸ್ಪ್ರೆಸ್ ರೈಲುಗಳಲ್ಲಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದವರ ಸಂಖ್ಯೆ 2,296. ಇವರಲ್ಲಿ 780 ಮಂದಿಯಷ್ಟೇ ಟಿಕೆಟ್ ಬುಕ್ಕಿಂಗ್ ವೇಳೆ 35 ಪೈಸೆ ಪಾವತಿಸಿ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅಪಘಾತದಲ್ಲಿ 294 ಮಂದಿ ಸಾವನ್ನಪ್ಪಿದ್ದರು.
ಈ ದುರಂತದಲ್ಲಿ ಅಂಗವಿಕಲತೆಗೆ ಒಳಗಾಗಿ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಇಲ್ಲಿಯವರೆಗೆ 42.5 ಲಕ್ಷ ರೂಪಾಯಿ ಮೊತ್ತ ಪಾವತಿಸಲಾಗಿದೆ ಮತ್ತು ಆಸ್ಪತ್ರೆ ವೆಚ್ಚದ ಭಾಗವಾಗಿ ಅರ್ಜಿ ಸಲ್ಲಿಸಿದವರಿಗೆ 5.77 ಲಕ್ಷ ರೂಪಾಯಿ ಪಾವತಿಸಲಾಗಿದೆ.
ADVERTISEMENT
ADVERTISEMENT