ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಮಳೆ ಬಂದರೇ ಸಾಕು ಇಡೀ ಶಾಲೆಯ ಮೇಲ್ಛಾವಣಿ ಸೋರುತ್ತದೆ.
ತರಗತಿಗಳಲ್ಲಿ ಮಳೆ ನೀರು ಆವರಿಸುತ್ತದೆ. ಮಳೆ ಬಂದರೇ ಸಾಕು ಮಕ್ಕಳು, ಶಿಕ್ಷಕರು ಸಂಕಷ್ಟಕ್ಕೆ ಒಳಗಾಗುತ್ತಾರೆ.
ಈಗಂತೂ ಮಳೆಗಾಲ. ಮಲೆನಾಡಿನ ಭಾಗವಾಗಿರುವ ಹೊಸನಗರ ತಾಲೂಕಿನಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಪರಿಣಾಮ ಕೋಡೂರು ಶಾಲೆಯೀಗ ಮಳೆ ಶಾಲೆಯಾಗಿ ಮಾರ್ಪಟ್ಟಿದೆ.
ತರಗತಿಗಳಲ್ಲಿ ಮಕ್ಕಳು ಕೊಡೆ ಹಿಡಿದು ಪಾಠ ಕೇಳುವಂತಾಗಿದೆ. ಶಿಕ್ಷಕರ ಸ್ಥಿತಿಯೂ ಭಿನ್ನವಾಗಿಲ್ಲ. ಪುಣ್ಯಕ್ಕೆ ಶಾಲೆಯಲ್ಲಿ ಡೆಸ್ಕ್ಗಳಿವೆ. ಇಲ್ಲದಿದ್ದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಜಾಗ ಇರುತ್ತಿರಲಿಲ್ಲ.
ಶಾಲಾ ಶಿಕ್ಷಕರು ಈ ಬಗ್ಗೆ ಬಿಇಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಶಾಲಾ ಕಟ್ಡದ ದುರಸ್ಥಿ ಮಾಡಿಸುವಂತೆ ಶಾಸಕರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮೇಲ್ಛಾವಣಿ ಕುಸಿದರೆ ಏನು ಗತಿ ಎಂಬ ಭೀತಿ ಶಿಕ್ಷಕರು, ಮಕ್ಕಳಲ್ಲಿ ಆವರಿಸಿದೆ.
ಕೋಡೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿಯರೆಗೂ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ
ADVERTISEMENT
ADVERTISEMENT