ADVERTISEMENT
ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆಯಾದರೂ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಭಾರೀ ಮಳೆ ಕೊರತೆ ಆಗಿದೆ.
ಜೂನ್ 1ರಿಂದ ಜೂನ್ 24ರವರೆಗೆ ರಾಜ್ಯದಲ್ಲಿ ಸರಾಸರಿ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಶೇಕಡಾ 66ರಷ್ಟು ಮಳೆ ಕೊರತೆ ಉಂಟಾಗಿದೆ.
ಜೂನ್ 1ರಿಂದ ಜೂನ್ 24ರ ಅವಧಿಯಲ್ಲಿ ರಾಜ್ಯದಲ್ಲಿ ಆಗುತ್ತಿದ್ದ ಸರಾಸರಿ ಮಳೆ ಪ್ರಮಾಣ 145.2 ಮಿಲಿಮೀಟರ್. ಆದರೆ ಈ ವರ್ಷ ಕೇವಲ 48.4 ಮಿಲಿ ಮೀಟರ್ನಷ್ಟು ಮಳೆಯಾಗಿದೆ.
ಜೂನ್ 1ರಿಂದ 24ವರೆಗೆ |
ಸರಾಸರಿ (ಮಿಲಿಮೀಟರ್) |
ಈ ಬಾರಿ |
ಕೊರತೆ |
ರಾಜ್ಯದಲ್ಲಿ |
145.2 |
48.4 |
66% |
ದಕ್ಷಿಣ ಒಳನಾಡು |
57 |
45 |
21% |
ಉತ್ತರ ಒಳನಾಡು |
82 |
29 |
65% |
ಮಲೆನಾಡು |
266 |
58 |
78% |
ಕರಾವಳಿ ಕರ್ನಾಟಕ |
619 |
118 |
70% |
ದಕ್ಷಿಣ ಒಳನಾಡು ಪ್ರದೇಶದಲ್ಲಿ ಸರಾಸರಿ 57 ಮಿಲಿ ಮೀಟರ್ ಮಳೆ ಆಗುತ್ತಿತ್ತು, ಆದ್ರೆ 45 ಮಿಲಿ ಮೀಟರ್ ಮಳೆ ಆಗಿದ್ದು ಜೂನ್ 1ರಿಂದ ಜೂನ್ 24ರವರೆಗೆ ಶೇಕಡಾ 21ರಷ್ಟು ಮಳೆ ಕೊರತೆಯಾಗಿದೆ.
ಉತ್ತರ ಒಳನಾಡಿನಲ್ಲಿ ಜೂನ್ 1ರಿಂದ ಜೂನ್ 24ರ ಅವಧಿಯಲ್ಲಿ 82 ಮಿಲಿ ಮೀಟರ್ ಮಳೆ ಆಗುತ್ತಿತ್ತು. ಆದರೆ ಈ ಬಾರಿ 29 ಮಿಲಿ ಮೀಟರ್ ಮಳೆಯಾಗಿದ್ದು ಶೇಕಡಾ 65ರಷ್ಟು ಮಳೆ ಕೊರತೆ ಉಂಟಾಗಿದೆ.
ಮಲೆನಾಡು ಭಾಗದಲ್ಲಿ ವಾಡಿಕೆಯ 266 ಮಿಲಿ ಮೀಟರ್ ಮಳೆ ಬದಲು ಕೇವಲ 58 ಮಿಲಿಮೀಟರ್ ಮಳೆಯಾಗಿದ್ದು, ಶೇಕಡಾ 78ರಷ್ಟು ಮಳೆ ಕೊರತೆಯಾಗಿದೆ.
ಕರಾವಳಿ ಕರ್ನಾಟಕದಲ್ಲಿ ಸರಾಸರಿ 619 ಮಿಲಿ ಮೀಟರ್ ಮಳೆ ಬದಲು 118 ಮಿಲಿ ಮೀಟರ್ ಮಳೆಯಾಗಿದ್ದು ಶೇಕಡಾ 70ರಷ್ಟು ಮಳೆ ಕೊರತೆಯಾಗಿದೆ.
ADVERTISEMENT