ಹೊಸ ವರ್ಷಕ್ಕೆ ರಾಜಸ್ಥಾನ ಸರ್ಕಾರ ಮಹಿಳೆಯರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಜನವರಿ 1 ರಿಂದ ಕೇವಲ 450 ರೂಪಾಯಿಗೆ ಸಿಲಿಂಡರ್ ದೊರೆಯಲಿದೆ ಅಂತ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲಿ ಸಿಲಿಂಡರ್ ಬೆಲೆ ಇಳಿಕೆ ಮಾಡೋದಾಗಿ ಬಿಜೆಪಿ ಹೇಳಿಕೊಂಡಿತ್ತು. ಅಂತೆಯೇ ಸಿಎಂ ಭಜನ್ ಲಾಲ್ ಶರ್ಮಾ 450 ರೂಪಾಯಿಗೆ ಗೃಹಬಳಕೆ ಅಡುಗೆ ಸಿಲಿಂಡರ್ ಸಿಗಲಿದೆ ಅಂತ ಘೋಷಿಸಿದ್ದಾರೆ. ಸದ್ಯ ಉಜ್ವಲಾ ಯೋಜನೆಯಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 500 ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇದೀಗ 50 ರೂಪಾಯಿ ಕಡಿತಗೊಳಿಸೋ ಮೂಲಕ ಕೊಟ್ಟ ಮಾತನ್ನು ಬಿಜೆಪಿ ಈಡೇರಿಸಿದೆ.
ಈ ಮೂಲಕ ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮವನ್ನು ರಾಜಸ್ಥಾನ BJP ಸರ್ಕಾರ ಮತ್ತಷ್ಟು ಹೆಚ್ಚಿಸಿದೆ.