ಖ್ಯಾತ ನಟ ರಜನೀಕಾಂತ್ ತನ್ನ ಅಭಿಮಾನಿಯೊಬ್ಬರ ಮದುವೆಗೆ ಚಿನ್ನದ ಸರ ಗಿಫ್ಟ್ ನೀಡುವ ಮೂಲಕ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ.
ಕರ್ನಾಟಕದ ರಜನಿಕಾಂತ್ ಸಂಘಟನೆಯ ಸಂತೋಷ್ ಅನ್ನೋರಿಗೆ ಇತ್ತೀಚಿಗೆ ಮದುವೆಯಾಗಿತ್ತು. ಮದುವೆಗೆ ಬರಲು ರಜನೀಕಾಂತ್ ಗೆ ಆಹ್ವಾನ ನೀಡಿದ್ದರು. ಆದರೆ, ರಜನೀಕಾಂತ್ಗೆ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ತಲೈವಾ ರಜನೀಕಾಂತ್ ಪತಿ ಪತ್ನಿಯರನ್ನು ಮನೆಗೆ ಕರೆಸಿಕೊಂಡು ನವ ವಧು ವರರಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ, ಚಿನ್ನದ ಸರವನ್ನು ಗಿಫ್ಟ್ ಮಾಡಿದ್ದಾರೆ.
ಅಭಿಮಾನಿ ಸಂತೋಷ್ ಈ ಅನಿರೀಕ್ಷಿತ ಭೇಟಿಗೆ ತುಂಬಾ ಸಂತೋಷಗೊಂಡಿದ್ದಾರೆ.