ನಾಳೆ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತ ಲೆಕ್ಕಾಚಾರ ಹೇಗಿದೆ..? ಯಾವ ಪಕ್ಷ ಅತೀ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ ಇಲ್ಲಿದೆ.
ವಿಧಾನಸಭೆಯ ಶಾಸಕರು ರಾಜ್ಯಸಭೆಗೆ ಸಂಸದರನ್ನು ಆಯ್ಕೆ ಮಾಡುತ್ತಾರೆ. ಸದ್ಯದ ಬಲಾಬಲದಲ್ಲಿ ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್ನ ಒಬ್ಬರು ಅಭ್ಯರ್ಥಿ ನಿರಾಂತಕವಾಗಿ ರಾಜ್ಯಸಭೆಗೆ ಆಯ್ಕೆ ಆಗುತ್ತಾರೆ. ಆದರೆ ಬಹುಮತ ಇಲ್ಲದ ಕಾರಣ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಮತ್ತು ಕಾಂಗ್ರೆಸ್ನ ಮನ್ಸೂರ್ ಅಲಿ ಖಾನ್ ನಡುವಿನ ಸ್ಪರ್ಧೆ ರೋಚಕತೆ ಪಡೆದಿದೆ.
ಮತ ಹಾಕಲಿರುವ ಶಾಸಕರು:
ಬಿಜೆಪಿ: 120+ಪಕ್ಷೇತರ ಶಾಸಕ ನಾಗೇಶ್+ಬಿಎಸ್ಪಿ ಶಾಸಕ ಎನ್ ಮಹೇಶ್ = 122
ಕಾಂಗ್ರೆಸ್ 69+ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ = 70
ಜೆಡಿಎಸ್: 32
ಒಬ್ಬ ಶಾಸಕರ ಮತ ಮೌಲ್ಯ:
ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಒಬ್ಬ ಅಭ್ಯರ್ಥಿ ಪಡೆಯಬೇಕಿರುವ ಮತಗಳ ಮೌಲ್ಯ: 4,481 (ಮೊದಲ ಪ್ರಾಶಸ್ತದ 1 ಮತದ ಮೌಲ್ಯ 100. ಅಂದರೆ 45 ಶಾಸಕರ ಮತಗಳ ಮೌಲ್ಯ = 4,500). ಎರಡನೇ ಪ್ರಾಶಸ್ತದ ಮತಗಳ ಮೌಲ್ಯ: 10.
ಮತ ಮೌಲ್ಯ ಲೆಕ್ಕಾಚಾರ:
224 (ವಿಧಾನಸಭೆಯ ಒಟ್ಟು ಶಾಸಕರು)ನ್ನು 100 ರೊಂದಿಗೆ ಗುಣಿಸಿ ಅದನ್ನು 5 ರಿಂದ ಭಾಗಿಸಬೇಕು (ಚುನಾವಣೆ ನಡೆಯುವ ಸ್ಥಾನಗಳು (4)+1)+1
ಆಗ ಬರುವ ಮತ ಮೌಲ್ಯ 4,480+1 = 4,481
ಮೊದಲ ಆಯ್ಕೆಯ ಮತದ ಮೌಲ್ಯ: 100
ಅಂದರೆ 45 ಶಾಸಕರ ಮೊದಲ ಆಯ್ಕೆಯ ಮತಗಳನ್ನು 100ರೊಂದಿಗೆ ಗುಣಿಸಿದಾಗ = 4,500 (ಗೆಲ್ಲಲು ಬೇಕಾಗಿರುವ ಮತಗಳ ಮೌಲ್ಯ 4,481) (ಅಂದರೆ ಮೊದಲ ಆಯ್ಕೆಯಲ್ಲಿ ಗೆಲ್ಲುವ ಅಭ್ಯರ್ಥಿ ಬಳಿ ಹೆಚ್ಚುವರಿ ಆಗಿ 19 ಮತ ಮೌಲ್ಯ ಉಳಿದುಕೊಳ್ಳುತ್ತದೆ).
ಬಿಜೆಪಿ ರಣತಂತ್ರ:
ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಲೆಹರ್ ಸಿಂಗ್. ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಮತ್ತು ಎರಡನೇ ಅಭ್ಯರ್ಥಿ ನಟ ಜಗ್ಗೇಶ್ ಇವರಿಬ್ಬರೂ ಮೊದಲ ಮಹತ್ವದ ಮತ ಪಡೆದು ರಾಜ್ಯಸಭೆಗೆ ಪ್ರವೇಶಿಸುತ್ತಾರೆ. ಆಗ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಉಳಿಕೆ ಆಗುವ ಬಿಜೆಪಿ ಶಾಸಕರ ಮತಗಳು: 32 (45+45+32=122).
ಮೂರು ತಂಡಗಳಾಗಿ ಬಿಜೆಪಿ ಶಾಸಕರು ಮತದಾನ ಮಾಡಲಿದ್ದಾರೆ. ಮೊದಲ ಆಯ್ಕೆಯ ಮತವನ್ನು ಒಬ್ಬರಿಗಷ್ಟೇ ನೀಡಲು ಸಾಧ್ಯ. ಮೊದಲ ಆಯ್ಕೆಯ ಮತವನ್ನು ಹಾಕಿದ ಶಾಸಕರು ತಮ್ಮ ಎರಡನೇ ಆಯ್ಕೆಯ ಮತವನ್ನು ಪಕ್ಷ ಸೂಚಿಸಿದ ಉಳಿದ ಅಭ್ಯರ್ಥಿಗೆ ಹಾಕಬಹುದು. ಆದರೆ ಒಬ್ಬ ಶಾಸಕ ತಾನು ಮೊದಲ ಆಯ್ಕೆಯ ಮತಗಳನ್ನು ಕೊಟ್ಟ ಅಭ್ಯರ್ಥಿಗೆ 2ನೇ ಆಯ್ಕೆಯ ಮತಗಳನ್ನು ಕೊಡಲು ಅವಕಾಶವಿಲ್ಲ.
ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಆಯ್ಕೆಯ ಮತಗಳನ್ನು ಕೊಡುವ 45 ಬಿಜೆಪಿ ಶಾಸಕರಿಗೆ ಮತ್ತು ನಟ ಜಗ್ಗೇಶ್ ಅವರಿಗೆ ಮೊದಲ ಆಯ್ಕೆಯ ಮತಗಳನ್ನು ಕೊಡುವ 45 ಶಾಸಕರಿಗೆ ಅಂದರೆ 90 ಬಿಜೆಪಿ ಶಾಸಕರಿಗೆ ತಮ್ಮ ಪಕ್ಷದ ಮೂರನೇ ಅಭ್ಯರ್ಥಿಗೆ ಎರಡನೇ ಆಯ್ಕೆಯ ಮತಗಳನ್ನು ನೀಡಲು ಅವಕಾಶ ಇದೆ. ಆದರೆ ಲೆಹರ್ ಸಿಂಗ್ ಅವರಿಗೆ ಉಳಿಕೆ ಆಗುವ 32 ಬಿಜೆಪಿ ಶಾಸಕರ ಮೊದಲ ಆಯ್ಕೆಯ ಮತಗಳು ಮತ್ತು 90 ಶಾಸಕರ ಎರಡನೇ ಆಯ್ಕೆಯ ಮತಗಳು ಸಿಗುತ್ತವೆ.
ಎರಡನೇ ಆಯ್ಕೆ ಮತಗಳೇ ನಿರ್ಣಾಯಕ:
ಲೆಹರ್ ಸಿಂಗ್, ಕುಪೇಂದ್ರ ರೆಡ್ಡಿ ಮತ್ತು ಮನ್ಸೂರ್ ಅಲಿ ಖಾನ್ ಅವರ ಆಯ್ಕೆಗೆ ಎರಡನೇ ಆಯ್ಕೆಯ ಮತಗಳೇ ನಿರ್ಣಾಯಕ.
ಲೆಹರ್ ಸಿಂಗ್ಗೆ ಎರಡನೇ ಆಯ್ಕೆ ಮತಗಳು: 90
ಮನ್ಸೂರ್ ಅಲಿ ಖಾನ್ಗೆ ಎರಡನೇ ಆಯ್ಕೆ ಮತಗಳು: 45
ಕುಪೇಂದ್ರ ರೆಡ್ಡಿ ಅವರಿಗೆ ಎರಡನೇ ಆಯ್ಕೆ ಮತಗಳು = 00 (ಒಂದು ವೇಳೆ ಬಿಜೆಪಿಯವರು ಮತ್ತು ಕಾಂಗ್ರೆಸ್ ನವರು ಎರಡನೇ ಆಯ್ಕೆ ಮತ ಕೊಟ್ಟರಷ್ಟೇ ಸಿಗುತ್ತದೆ. ಆದರೆ ಬಿಜೆಪಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ತನ್ನ ಎಲ್ಲ 90 ಎರಡನೇ ಆಯ್ಕೆಯ ಮತಗಳನ್ನು ಲೆಹರ್ ಸಿಂಗ್ ಅವರಿಗಷ್ಟೇ ಹಾಕುತ್ತದೆ, ಜೆಡಿಎಸ್ಗೆ ಅಲ್ಲ. ಕಾಂಗ್ರೆಸ್ ಕೂಡಾ ತನ್ನ ಎರಡನೇ ಆಯ್ಕೆಯ 45 ಮತಗಳನ್ನು ಮನ್ಸೂರ್ ಅಲಿ ಖಾನ್ ಅವರಿಗೇ ಹಾಕುತ್ತದೆ.)
ರಾಜ್ಯಸಭೆ 4 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಒಬ್ಬ ಅಭ್ಯರ್ಥಿ ಪಡೆಯಬೇಕಾಗಿರುವ ಮತಗಳ ಮೌಲ್ಯ: 4,481. ಮೊದಲ ಆಯ್ಕೆಯ 1 ಮತದ ಮತದ ಮೌಲ್ಯ: 100. ಎರಡನೇ ಆಯ್ಕೆಯ ಒಂದು ಮತದ ಮೌಲ್ಯ: 10.
ಬಿಜೆಪಿ ಲೆಕ್ಕಾಚಾರ:
ಬಿಜೆಪಿ ಪ್ಲಾನ್ ಎ:
ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಅವರಿಗೆ ತಲಾ 45 ಶಾಸಕರು ಮೊದಲ ಆಯ್ಕೆಯ ಮತಗಳನ್ನು ಹಾಕಿದ ಬಳಿಕ ಲೆಹರ್ ಸಿಂಗ್ ಅವರಿಗೆ ಬಿಜೆಪಿಯಿಂದ ಸಿಗಬಹುದಾದ ಎರಡನೇ ಪ್ರಾಶಸ್ತದ ಮತಗಳು: 90 (90*10 = 900). ಲೆಹರ್ ಸಿಂಗ್ ಅವರಿಗೆ ಸಿಗಬಹುದಾದ ಮೊದಲ ಪ್ರಾಶಸ್ತದ ಮತಗಳು: 32 (32*100=3,200). ಅಂದರೆ ಲೆಹರ್ ಸಿಂಗ್ ಅವರಿಗೆ ಸಿಗಬಹುದಾದ ಒಟ್ಟು ಮತಗಳ ಮೌಲ್ಯಗಳು: 4,100 ಮತ ಮೌಲ್ಯ ( ಕೊರತೆ 381 ಮತ ಮೌಲ್ಯಗಳ ಕೊರತೆ)
ಬಿಜೆಪಿ ಪ್ಲಾನ್ ಬಿ:
ನಿರ್ಮಲಾ ಸೀತಾರಾಮನ್ ಅವರಿಗೆ 46 ಶಾಸಕರ ಮೊದಲ ಆಯ್ಕೆಯ ಮತಗಳನ್ನು ನೀಡಿದ ಬಳಿಕ ಲೆಹರ್ ಸಿಂಗ್ ಮತ್ತು ಜಗ್ಗೇಶ್ ಅವರಿಗೆ ಸಿಗಬಹುದಾದ ಮೊದಲ ಪ್ರಾಶಸ್ತದ ಮತಗಳು : ತಲಾ 38 ( 38*100 = 3,800).
ಆಗ ಬಿಜೆಪಿಯ 122 ಶಾಸಕರಿಗೂ ಎರಡನೇ ಪ್ರಾಶಸ್ತದ ಮತಗಳನ್ನು ಹಾಕಲು ಅವಕಾಶ ಇರುತ್ತದೆ.
(122*10 = 1,220/100 = 1.2). ಈ 1,200 ಮೌಲ್ಯದ ಮತಗಳನ್ನು ಮೊದಲ ಆಯ್ಕೆಯ ಮತಗಳಾಗಿ ವರ್ಗಿಸಿಕರಿಸಿದರೆ (1200/100) 12 ಮೊದಲ ಪ್ರಾಶಸ್ತದ ಮತಗಳಾಗುತ್ತವೆ. ಈ 12 ಮತಗಳಲ್ಲಿ 6 ಮೊದಲ ಆಯ್ಕೆಯ ಮತ ಜಗ್ಗೇಶಗೂ, ಉಳಿದ 6 ಮೊದಲ ಆಯ್ಕೆಯ ಮತಗಳು ಲೆಹರ್ ಸಿಂಗ್ಗೂ ಬೀಳಬಹುದು.
ಆಗ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಬಳಿ ಇರುವ ಮೊದಲ ಪ್ರಾಶಸ್ತದ ಮತಗಳು: 44 (44*100 = 4,400 ಮತ ಮೌಲ್ಯ).
ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಪ್ರಾಶಸ್ತದ 46 ಮತಗಳನ್ನು ನೀಡಿದರೆ ಮತ ಮೌಲ್ಯ: 46*100 = 4,600 ಮತ ಮೌಲ್ಯ
ಆದರೆ ಜಗ್ಗೇಶ್ ಅವರಾಗಲೀ ಲೆಹರ್ ಸಿಂಗ್ ಅವರಾಗಲೀ ಗೆಲ್ಲಲು ಎರಡನೇ ಪ್ರಾಶಸ್ತö್ಯದ ತಲಾ 9 (ಅಂದರೆ ಒಟ್ಟು 18 ದ್ವಿತೀಯ ಪ್ರಾಶಸ್ತದ ಮತಗಳು ಅನಿವಾರ್ಯ.) ಈ ದ್ವಿತೀಯ ಪ್ರಾಶಸ್ತದ ಮತಗಳು ಜೆಡಿಎಸ್ ಅಥವಾ ಕಾಂಗ್ರೆಸ್ನಿಂದಲೇ ಬರಬೇಕು.
ಶರತ್ ಬಚ್ಚೇಗೌಡ ಲೆಕ್ಕಾಚಾರ:
ಒಂದು ವೇಳೆ ಶರತ್ ಬಚ್ಚೇಗೌಡ ಅವರು ಬಿಜೆಪಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತö್ಯದ ಹಾಕಿದರೆ ಆಗ ಜಗ್ಗೇಶ್ ಅಥವಾ ಲೆಹರ್ ಸಿಂಗ್ ಗೆಲ್ತಾರೆ. ಆಗ ಇಬ್ಬರಲ್ಲಿ ಒಬ್ಬರಿಗೆ ಗೆಲ್ಲಲು ಬೇಕಾಗಿರುವ ಎರಡನೇ ಪ್ರಾಶಸ್ತö್ಯದ ಮತಗಳು ಕೇವಲ 9 ಶಾಸಕರದ್ದಷ್ಟೇ. (ಈ ಎರಡನೇ ಪ್ರಾಶಸ್ತö್ಯದ ಮತಗಳು ಜೆಡಿಎಸ್ನಿಂದ ಅಥವಾ ಕಾಂಗ್ರೆಸ್ನಿAದ ಬರಬೇಕಷ್ಟೇ).
ಜೆಡಿಎಸ್ ಅಡ್ಡಮತದಾನ ಲೆಕ್ಕಾಚಾರ:
ಒಂದು ವೇಳೆ ಜೆಡಿಎಸ್ನಲ್ಲಿ ಒಬ್ಬ ಶಾಸಕ ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದರೆ ಆಗ ಲೆಹರ್ ಸಿಂಗ್ ಅಥವಾ ಜಗ್ಗೇಶ್ ಗೆಲ್ತಾರೆ. ಅಂದರೆ ಶರತ್ ಬಚ್ಚೇಗೌಡ ಮತ್ತು ಜೆಡಿಎಸ್ ಒಂದು ಅಡ್ಡ ಮತದಾನದಿಂದ ಇಬ್ಬರೂ ಸುಲಭದಲ್ಲೇ ರಾಜ್ಯಸಭೆಗೆ ಪ್ರವೇಶಿಸ್ತಾರೆ.
ಅಥವಾ
ಒಂದು ವೇಳೆ ಕಾಂಗ್ರೆಸ್ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಆಗಲೀ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಆಗಲೀ ಬಿಜೆಪಿಯ ಮೂರನೇ ಅಭ್ಯರ್ಥಿಗಿಂತ ಕಡಿಮೆ ಮತ ಮೌಲ್ಯಗಳನ್ನು ಪಡೆದರೆ ಆಗ ಬಿಜೆಪಿಯೇ ಮೂರು ಸ್ಥಾನಗಳನ್ನು ಗೆದ್ದಿದೆ ಎಂದು ಘೋಷಿಸಬಹುದು.
ಜೆಡಿಎಸ್ ಲೆಕ್ಕಾಚಾರ:
ಜೆಡಿಎಸ್ ಪಕ್ಷದಿಂದ ಅವರ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ 32 ಶಾಸಕರ ಮೊದಲ ಆಯ್ಕೆಯ ಮತಗಳು ಸಿಗಬಹುದು. ಆದರೆ ಬಹಮತಕ್ಕೆ 13 ಶಾಸಕರ ಮೊದಲ ಆಯ್ಕೆಯ ಮತಗಳ ಕೊರತೆ ಉಂಟಾಗುತ್ತದೆ. ಒಂದು ವೇಳೆ ಭಿನ್ನಮತೀಯ ಶಾಸಕರು ಕುಪೇಂದ್ರ ರೆಡ್ಡಿ ಅವರಿಗೆ ಮೊದಲ ಆಯ್ಕೆಯ ಮತ ಹಾಕದೇ ಹೋದಲ್ಲಿ ಆಗ ಇನ್ನಷ್ಟು ಹಿನ್ನಡೆ ಆಗುತ್ತದೆ.
ಕುಪೇಂದ್ರ ರೆಡ್ಡಿ ಪಡೆಯಬಹುದಾದ ಮತ ಮೌಲ್ಯ: 32 ಶಾಸಕರು * 1 ಮತದ ಮೌಲ್ಯ 100 = 3,200
ಆಯ್ಕೆಗೆ ಬೇಕಾಗಿರುವ ಮತಗಳ ಮೌಲ್ಯ: 4,481 – ಕೊರತೆ : 1,281 ( 133 ಎರಡನೇ ಪ್ರಾಶಸ್ತದ ಮತಗಳು ಅಗತ್ಯ ಅಥವಾ 13 ಮೊದಲ ಪ್ರಾಶಸ್ತದ ಮತಗಳು ಅನಿವಾರ್ಯ). (ಕಾಂಗ್ರೆಸ್ ಬಳಿ ಇರುವ ಎರಡನೇ ಪ್ರಾಶಸ್ತದ ಮತಗಳು 45. ಮೊದಲ ಅಭ್ಯರ್ಥಿ ಗೆದ್ದು ಉಳಿಕೆ ಆಗುವ ಮೊದಲ ಪ್ರಾಶಸ್ತದ ಮತಗಳು: 25).
ಒಂದು ವೇಳೆ ಮನ್ಸೂರ್ ಅಲಿ ಖಾನ್ ಅವರ ಬದಲು ಕುಪೇಂದ್ರ ರೆಡ್ಡಿ ಅವರಿಗೆ ಮೊದಲ ಪ್ರಾಶಸ್ತದ ಮತವನ್ನು ನೀಡಿದರೆ ಆಗ ಕುಪೇಂದ್ರ ರೆಡ್ಡಿ ಗೆಲ್ತಾರೆ.
ಕಾಂಗ್ರೆಸ್ ಲೆಕ್ಕಾಚಾರ:
ಕಾಂಗ್ರೆಸ್ ಪಕ್ಷದಿಂದ ಮೊದಲ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ ಆ ಪಕ್ಷದ 45 ಶಾಸಕರ ಮೊದಲ ಆಯ್ಕೆಯ ಮತಗಳು ಸಿಗುತ್ತವೆ. ಈ ಮೂಲಕ ಅವರ ಆಯ್ಕೆ ಖಚಿತವಾಗಿದೆ. ಆದರೆ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರಿಗೆ ಸಿಗುವ ಕಾಂಗ್ರೆಸ್ನ ಮೊದಲ ಆಯ್ಕೆ ಮತಗಳು ಕೇವಲ 25. (45+25=70 ಶಾಸಕರು (ಶರತ್ ಬಚ್ಚೇಗೌಡ ಮತವೂ ಸೇರಿ).
ಆದರೆ ಜೈರಾಂ ರಮೇಶ್ ಅವರಿಗೆ ಮೊದಲ ಆಯ್ಕೆ ಮತಗಳನ್ನು ಹಾಕಿದ 45 ಶಾಸಕರ ಎರಡನೇ ಆಯ್ಕೆಯ ಮತಗಳು ಮನ್ಸೂರ್ ಅಲಿ ಖಾನ್ ಅವರಿಗೆ ಲಭಿಸುತ್ತದೆ.
ಆಗ ಮನ್ಸೂರ್ ಅಲಿಖಾನ್ಗೆ ಸಿಗುವ ಮೊದಲ ಪ್ರಾಶಸ್ತದ ಒಟ್ಟು ಮತಗಳ ಮೌಲ್ಯ: (2,500+450 (ಎರಡನೇ ಪ್ರಾಶಸ್ತದ 45 ಮತಗಳ ಮೌಲ್ಯ = 450) = 2,950.
ಅಂದರೆ ಮನ್ಸೂರ್ ಅಲಿ ಖಾನ್ ಅವರಿಗೆ ಗೆಲ್ಲಲು 1,531 ಮತಗಳ ಮೌಲ್ಯ ಕೊರತೆ ಆಗಿ ಕಾಡಲಿದೆ. 16 ಮೊದಲ ಪ್ರಾಶಸ್ತದ ಮತಗಳು ಅಥವಾ 116 ಎರಡನೇ ಪ್ರಾಶಸ್ತದ ಮತಗಳು ಅನಿವಾರ್ಯ). ಅಂದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ 32 ಮೊದಲ ಮತಗಳನ್ನು ಮನ್ಸೂರ್ ಅಲಿ ಖಾನ್ ಅವರಿಗೆ ನೀಡಿದರೆ ಅವರು ಸುಲಭವಾಗಿ ಗೆಲ್ಲಬಹುದು.